ಮೈಸೂರು : ಮುಡಾ 50:50 ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದ್ದೂ ನವೆಂಬರ್ 6 ರಂದು ಲೋಕಾಯುಕ್ತ ಎದುರು ಬೆಳಗ್ಗೆ 10.30 ಗಂಟೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದೆ.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರಿಂದ ನೋಟಿಸ್ ಜಾರಿಯಾಗಿದ್ದು ಮುಡಾ 50:50 ಹಗರಣ ಪ್ರಕರಣ ಪ್ರಕರಣದಲ್ಲಿ ಈಗಾಗಲೇ A2,A3,A4 ವಿಚಾರಣೆಗೆ ನೋಟೀಸ್ ನೀಡಿದೆ. ಕಳೆದ ವಾರ A2 ಸಿಎಂ ಪತ್ನಿ ಪಾರ್ವತಿ ವಿಚಾರಣೆ ಮುಕ್ತಾಯವಾಗಿದ್ದು A3 & A4 ಆರೋಪಿಗಳನ್ನು ಜೊತೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಕರೆಹಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ A4 ಭೂಮಿ ಮಾರಿದ ಆರೋಪಿ ದೇವರಾಜು ಸದ್ಯ A1 ಆರೋಪಿ ಸಿದ್ದರಾಮಯ್ಯಗೆ ನೋಟಿಸ್ ಜಾರಿ ಖುದ್ದು ಲೋಕಾಯುಕ್ತ ಎದುರು ಹಾಜರಾಗುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಿದೆ. ಇನ್ನು ಮುಡಾದ ಸೈಟ್ ಬಗ್ಗೆಯೂ ಸಹ ಲೋಕಾಯುಕ್ತ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಅಲ್ಲದೇ ಸಿಎಂ ಕುಟುಂಬಕ್ಕೆ ಹಂಚಿಕೆಯಾಗಿದ್ದ ಸೈಟ್ಗಳಿಗೂ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.