ಮೈಸೂರು : ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಮಾಜಿ ಸಚಿವ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಸುದ್ದಿ ಗೋಷ್ಠಿ ನಡೆಸಿದ್ದು ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಸಾ ರಾ ಮಹೇಶ್,ಮಾಜಿ ಶಾಸಕರಾದ ಕೆ.ಮಹದೇವ,ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತಿಯಿದ್ದರು.

ಈ ಬಗ್ಗೆ ಮಾತನಾಡಿದ ಅವರು ಉಪ್ಪು ತಿಂದವರು ನೀರು ಕುಡಿಯಬೇಕು ತಪ್ಪು ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಈಗಾಗಲೇ ಪಕ್ಷದ ಅಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ .ಜೊತೆಗೆ ಪ್ರಜ್ವಲ್ ರೇವಣ್ಣನನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಿದ್ದೇವೆ. 21 ನೇ ತಾರೀಖು ಪೆನ್ ಡ್ರೈವ್ ಹಂಚಿಕೆ ಆಗಿದೆ 22 ಕ್ಕೆ ಪೋಲಿಸ್ ಠಾಣೆಗೆ ದೂರು ಕೂಡ ದಾಖಲಾಗಿದೆ ಎಸ್ಐಟಿ ತಂಡ ಈಗ ತನಿಖೆ ಮಾಡುತ್ತಿದೆ ಕೆ.ಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ ರೇವಣ್ಣ ಅವರನ್ನೂ ಕೂಡ ಬಂಧಿಸಿದೆ. ಅಶ್ಲೀಲ ವೀಡಿಯೋಗಳನ್ನು ಯಾರೂ ಹಂಚಬಾರದು ಎಂದು ಈಗಾಗಲೇ ಎಸ್ಐಟಿ ತಂಟ ಪ್ರಕಟನೆ ಹೊರಡಿಸಿದೆ. ಇದೆಲ್ಲಾ ಡಿಸಿಎಂ ಡಿಕೆಶಿ ಅವರ ಪೋಷಣೆಯಿಂದಲೇ ನಡೆಯುತ್ತಿರುವುದು, ಸರ್ಕಾರ ಎಸ್ಐಟಿ ತಂಡವನ್ನ ಸರ್ಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದರ ಸಂಪೂರ್ಣ ನೇತೃತ್ವವನ್ನು ಉಪ ಮುಖ್ಯಮಂತ್ರಿಗಳು ವಹಿಸಿದ್ದಾರೆ ಎಂದರು.

ಯಾರನ್ನ ಎ1 ಮಾಡಬೇಕು ಯಾರನ್ನ ಎ2 ಮಾಡಬೇಕು ಎಂದು ಮುಖ್ಯಮಂತ್ರಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಷಡ್ಯಂತ್ರ ನಡೆಯುತ್ತಿದೆ ಪ್ರಕರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಡಿ ಕೆ ಶಿವಕುಮಾರ್ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡಬೇಕು ಸುದ್ದಿ ಗೋಷ್ಠಿಯಲ್ಲಿ ಜಿ.ಟಿ ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಈ ನಡುವೆ ಹಾಸನ ಪೆನ್ ಡ್ರೈವ್ ಬಿಡುಗಡೆ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡ ವಿಚಾರ.
ಮಂಡ್ಯದಲ್ಲಿಂದು ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆದಿದೆ. ರಾಜ್ಯ ಸರ್ಕಾರ, ಡಿಸಿಎಂ ಡಿಕೆಶಿ ಹಾಗೂ ಶಿವರಾಮೇಗೌಡ ವಿರುದ್ದ ಜೆಡಿಎಸ್ ಆಕ್ರೋಶ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರೊ ಪ್ರತಿಭಟನೆ ನಡೆಸಿದ್ದು ಪೆನ್ ಡ್ರೈ ಬಿಡುಗಡೆ ಮಾಡಿ, ಮಹಿಳೆಯರ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡರ ಪ್ರತಿಕೃತಿಗಳಿಗೆ ಚಪ್ಪಲಿ, ಪರಕೆಯಿಂದ ಹೊಡೆದು ಇಬ್ಬರ ವಿರುದ್ದ ಧಿಕ್ಕಾರ ಕೂಗಿ ಡಿಕೆಶಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ವಿವಿ ಪ್ರತಿಮೆ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ನಾಕಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


