ಮೈಸೂರು : `ಹನುಮ ಮಾಲಾ ಸಂಕೀರ್ತನ ಯಾತ್ರೆ’ ಮತ್ತೆ ಸಂಘರ್ಷಕ್ಕೆ ಸಾಕ್ಷಿಯಾದ ಘಟನೆ ಬುಧವಾರ ಶ್ರೀರಂಗಪಟ್ಟಣದಲ್ಲಿ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಶ್ರೀ ನಿಮಿಷಾಂಬ ದೇವ ಸ್ಥಾನದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಹನುಮ ಭಕ್ತರು ಸಾರ್ವಜನಿಕ ಸಭೆ ನೆರವೇರಿಸಿದ ಬಳಿಕ ನಿಮಿಷಾಂಬ ದೇವಸ್ಥಾನದಿಂದ 11ಗಂಟೆಗೆ ಬೃಹತ್ ಸಂಕೀರ್ತನ ಯಾತ್ರೆಯನ್ನು ಪ್ರಾರಂಭಿಸಿದರು.
ಶ್ರೀರAಗಪಟ್ಟಣದ ಕೋಟೆ ತಲುಪಿದ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ಬಳಿ ಹನುಮ ಭಕ್ತರ ಮೆರವಣಿಗೆಯ ಬರುತ್ತಿದ್ದಂತೆ ಮಸೀದಿ ಒಳಗೆ ನುಸುಳಲು ಪ್ರಯತ್ನಿಸಿದಾಗ, ಪೊಲೀಸರು ವ್ಯಾನ್‌ಗಳನ್ನು ಅಡ್ಡ ಇಟ್ಟು ತಡೆದರು.. ಆ ಸಂದರ್ಭದಲ್ಲಿ ಮಾಲಾಧಾರಿಗಳು ನಡುವೆ ತಳ್ಳಾಟ-ನೂಕಾಟ ನಡೆಯಿತು. ಮಾಲಾಧಾರಿಗಳ ಮನವೊಲಿಸಿ ನಿರ್ವಿಘ್ನವಾಗಿ ಯಾತ್ರೆ ನಡೆಸಲು ಪೊಲೀಸರು ಅವಕಾಶ ಕಲ್ಪಿಸಿದರು.
ನಂತರ ಹನುಮ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿಯ ದರ್ಶನ ಪಡೆದು, ಶ್ರೀ ರಂಗನಾಥಸ್ವಾಮಿ ಮೈದಾನದಲ್ಲಿ ಮಾಲಾ ವಿಸರ್ಜನೆ ಮಾಡಿದರು. ನಂತರ ಪ್ರಸಾದ ಸ್ವೀಕರಿಸಿ ಸಂಕೀರ್ತನ ಯಾತ್ರೆ ಕಾರ್ಯಕ್ರಮ ಪೊಲೀಸರ ಕಣ್ಗಾವಲಿನ ಮೂಲಕ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಹಲವಾರು ಜಿಲ್ಲೆಯಿಂದ ಸುಮಾರು ೫೦೦೦ ಮಾಲಾಧಾರಿಗಳು ಭಾಗವಹಿಸಿದ್ದರು
ಮಸೀದಿ ಒಡೆದು ಮಂದಿರ ಕಟುವೆವು' ್ಟಜಾಗ ನಮ್ಮದೇ, ಮಸೀದಿ ಒಡೆದು ಮಂದಿರ ಕಟ್ಟುವೆವು’ ಎಂದು ಶ್ರೀರAಗಪಟ್ಟಣದ ವಿವಾದಿತ ಜಾಮೀಯಾ ಮಸೀದಿ ಮುಂದೆ ಹನುಮ ಮಾಲಾಧಾರಿಗಳ ಘೋಷಣೆ ಕೂಗಿದರು. 239 ವರ್ಷಗಳಿಂದ ತೀವ್ರ ಅಪಮಾನ ಹಾಗೂ ನೋವನ್ನು ಸಹಿಸಿಕೊಂಡಿದ್ದು, ಮೂರ್ತಿಯ ಪುನರ್ ಪ್ರತಿಷ್ಠಾಪನೆ ಮೂಲಸ್ಥಾನದಲ್ಲಿಯೇ ಆಗಬೇಕು ಎಂದು ಹನುಮನ ಭಕ್ತರು ಆಗ್ರಹಿಸಿದರು. ಒಂದು ಭವ್ಯವಾದ ಹನುಮಂತನ ಮAದಿರ ಪುನರ್ ನಿರ್ಮಾಣವಾಗಲಿ ಎಂಬ ಸಂಕಲ್ಪದಿAದ ಈ ಮಾಲಾಧಾರಣೆಯನ್ನು ವರ್ಷಗಳಿಂದ ಮಾಡುತ್ತಲೇ ಬರುತ್ತಿದ್ದು, ಪ್ರತಿ ವರ್ಷ ಹನುಮ ಭಕ್ತರು ಹೆಚ್ಚಾಗುತ್ತಿದ್ದಾರೆ.


