ಮೈಸೂರು : ಬಹಿರ್ದೆಸೆಗಗೆಂದು ಬಯಲಿಗೆ ತೆರಳಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನಪ್ಪಿದ ಘಟನೆ ಸರಗೂರು ತಾಲೂಕು ಬಿ.ಮಟಕೆರೆ ಎಸ್.ಟಿ.ಕಾಲೋನಿಯಲ್ಲಿ ಬೆಳ್ಳಂಬೆಳಗ್ಗೆ ಅವಘಡ ಸಂಭವಿಸಿದೆ.
ಮಾದ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ.
ದೇವಸ್ಥಾನದಲ್ಲಿ ಕಾವಲುಗಾರನಾಗಿದ್ದ ಮಾದ ಬೆಳಗಿನ ಜಾವ ಬಹಿರ್ದಷೆಗೆಂದು ಬರುತ್ತಿದ್ದಾಗ ಹಠಾತ್ ಕಾಡಾನೆ ದಾಳಿ ನಡೆಸಿದ್ದು ಅಷ್ಟೋತ್ತಿಗೆ ಕಾಡಾನೆ ತುಳಿದು ಗಂಭೀರ ಗಾಯಗೊಂಡಿದ್ದು ,ಮಾದ ಚೀರಾಡುತ್ತಿದ್ದ ಸದ್ದು ಕೇಳಿ ಗ್ರಾಮಸ್ಥರು ಸ್ಳಕ್ಕಾಗಮಿಸಿ ಆನೆ ಹಿಮ್ಮೆಟ್ಟಿಸಿದ್ದಾರೆ ಆದರೆ ಆನೆ ದಾಳಿಯಿಂದ ಮಾದ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.


