ಮೈಸೂರು ; ರಾಜ್ಯದ ಮಹಿಳೆಯರ ಫ್ರೀ ಬಸ್ ಎಫೆಕ್ಟ್ ನಿಂದಾಗಿ ಆಧಾರ ಕಾರ್ಡ್ ಸಮೇತ ಮೂವರು ಬಾಲಕಿಯರು ನಾಪತ್ತೆ ಯಾಗಿದ್ದು ಇನ್ನೂ ಕೂಡ ಯಾರಿಗೂ ಪತ್ತೆಯಾಗದ ಘಟನೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದೆ.
ಮನೆ ಬಿಟ್ಟು ಪರಾರಿಯಾದ ಮೂವರು ಇನ್ನೂ ಕೂಡ ಯಾರಿಗೂ ಪತ್ತೆಯಾಗಿಲ್ಲ
ರಾತ್ರಿ ಮಲಗಿ ಬೆಳಗಾಗುವುದರಲ್ಲಿ ನಾಪತ್ತೆಯಾಗಿರುವ ಮೂವರು ಬಾಲಕಿಯರು ನಂಜನಗೂಡು ನಗರದ ನೀಲಕಂಠೇಶ್ವರ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ ಆಧಾರ ಕಾರ್ಡ್ ಮತ್ತು ಬಟ್ಟೆಗಳನ್ನು ತೆಗೆದುಕೊಂಡು ಫ್ರೀ ಬಸ್ ನಲ್ಲಿ ಹೊರಟಿದ್ದು ನಂಜನಗೂಡು ಪಟ್ಟಣದ ಅಶೋಕ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.
ಪುಟ್ಟ ಬಾಲಕಿಯರು ನಾಪತ್ತೆಯಾಗಿರುವ ಹಿನ್ನೆಲೆ ತಂದೆ ತಾಯಿ ಮತ್ತು ಪೋಷಕರು ಆತಂಕಕ್ಕೆ ಒಳಗಾಗಿ ರೋದಿಸುತ್ತಿದ್ದಾರೆ ಅಶೋಕ ಪುರಂ ಬಡಾವಣೆಯ ಮುದ್ದಯ್ಯ ಎಂಬುವರ ಪುತ್ರಿ 11 ವರ್ಷದ ಬಾಲಕಿ ಯಶ, ಸಿದ್ದರಾಜು ಎಂಬುವರ ಪುತ್ರಿ ಸಿಂಚನ 10 ವರ್ಷ, ಮತ್ತೋರ್ವ ಸಿದ್ದರಾಜು ಎಂಬುವರ ಪುತ್ರಿ ಅಮೂಲ್ಯ 10 ವರ್ಷ ನಾಪತ್ತೆಯಾಗಿರುವ ಬಾಲಕಿಯರಾಗಿದ್ದಾರೆ.
ನಂಜನಗೂಡು ನಗರದ ಹಳೆ ಬಸ್ ನಿಲ್ದಾಣದಲ್ಲಿ ಮೂವರು ಬಾಲಕಿಯರು ಧರ್ಮಸ್ಥಳಕ್ಕೆ ತೆರಳುವ ಸರ್ಕಾರಿ ಬಸ್ಸನ್ನು ಹತ್ತಿದ್ದಾರೆ ಎಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ ಆದರೆ ಇನ್ನು ಸಿಕ್ಕಿರುವುದಿಲ್ಲ.. ಏನೇ ಆಗಲಿ ಪೊಲೀಸ್ ಇಲಾಖೆ ಯಾವ ರೀತಿ ಮೂವರನ್ನು ಹುಡುಕಲು ಕ್ರಮ ತೆಗೆದುಕೊಳ್ಳುತ್ತದೆಂದು ಕಾದುನೋಡಬೇಕಾಗಿದೆ.