ಮೈಸೂರು : ಪತ್ನಿಯನ್ನ ಕೊಲೆ ಮಾಡಿ ಪತಿ ಸಂಪ್ ಒಳಗೆ ಹಾಕಿದ ಘಟನೆ ಮೈಸೂರಿನ ಆಲನಹಳ್ಳಿ 5ನೇ ಕ್ರಾಸ್ ನಲ್ಲಿ ನಡೆದಿದೆ. ಮೃತ ದುರ್ದೈವಿ ಪತ್ನಿಯನ್ನು (35) ಬಸಮಣಿ ಎಂದು ತಿಳಿದಿದೆ. ಪತಿ ಚೌಡಪ್ಪ (55) ಮನೆಯ ಸಂಪ್ ಒಳಗೆ ಹಾಕಿ ಕೊಲೆ ಮಾಡಿರುವ ಆರೋಪಿ.
ದಿನನಿತ್ಯ ಪತಿ ಪತ್ನಿ ಜಗಳ ಮಾಡುತ್ತಿದ್ದು ಸಂಸಾರದಲ್ಲಿ ಹೊಂದಾಣಿಕೆಯ ಇರಲಿಲ್ಲ ಎಂದು ತಿಳಿದುಬಂದಿದೆ.
ದಂಪತಿಗೆ 12 ವರ್ಷದ ಹೆಣ್ಣು ನಾಗಲಂಬಿಕ ಮತ್ತು 2 ವರ್ಷದ ಗಂಡು ಮಗು ಚಂದನ್ ಇದ್ದು ಇವರ ಜಗಳದಿಂದ ತಬ್ಬಲಿಯಾದಂತಾಗಿದೆ. ಸ್ಥಳಕ್ಕೆ ಆಲನಹಳ್ಳಿ ಪೊಲೀಸರು ಹಾಗೂ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯರ ಮಾಹಿತಿಯ ಪ್ರಕಾರ ಗಂಡ ಚೌಡಪ್ಪ ಅತ್ತೆ ಗೌರಮ್ಮ ಕಿರುಕುಳ ಆರೋಪ ಕೇಳಿಬಂದಿದೆ. ಪ್ರತಿನಿತ್ಯ ಮೃತ ಬಸಮಣಿ ಗೆ ಕಿರುಕುಳ ಕೊಟ್ಟು ಊಟ ಕೊಡದೆ ಜಗಳ ಮಾಡ್ತಿದ್ದ ಎಂದು ನೆರೆಮನೆಯವರ ಮಾತು.ತಾಯಿ ಕಳೆದುಕೊಂಡು ಮನೆಯ ಬಳಿ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದ್ದು ಪತ್ನಿ ತವರು ಊರು ಶಿಟ್ಟನಾಯಕನ ಹಳ್ಳಿಗೂ ಕಳಿಸದೆ ನಿತ್ಯ ಕಿರುಕುಳ ಕೊಡ್ತಿದ್ದ ಎಂದು ಅಕ್ಕ ಪಕ್ಕ ಮನೆಯರ ಆಕ್ರೋಶ ಹೊರಹಾಕಿದ್ದಾರೆ.