Thursday, September 18, 2025
Flats for sale
Homeರಾಜ್ಯಮೈಸೂರು : ನಾಡಹಬ್ಬ ಹಬ್ಬ ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಜಿಲ್ಲಾಧಿಕಾರಿಗೆ ಹಿಂದೂ...

ಮೈಸೂರು : ನಾಡಹಬ್ಬ ಹಬ್ಬ ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ದೂರು ..!

ಮೈಸೂರು : ನಾಡಹಬ್ಬ ಹಬ್ಬ ದಸರಾ ಉದ್ಘಾಟಕರ ವಿವಾದ ವಿಚಾರ ಇದೀಗ ರಾಜಕೀಯವಾಗಿ ಭುಗಿಲೆದ್ದಿದೆ.ಮೂರ್ತಿ ಪೂಜೆ ಇಲ್ಲ ಎನ್ನುವ ಧರ್ಮದವರು ನಮ್ಮ ಧರ್ಮವನ್ನು ಆಚರಣೆಯನ್ನು ಹೇಗೆ ಉದ್ಘಾಟನೆ ಮಾಡ್ತಾರೆ,ಸರಕಾರಕ್ಕೇನು ತಲೆಕೆಟ್ಟಿದೆಯಾ,ಮೈಸೂರು ದಸರಾಗೆ ಭಾನು ಮುಸ್ತಾಕ್ ಆಯ್ಕೆ ಸರಿಯಿಲ್ಲ ನಮ್ಮ ಧಾರ್ಮಿಕ ನಂಬಿಕೆಗಳನ್ನು ಸರ್ಕಾರ ಘಾಸಿಗೊಳಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಯಾವುದೇ ದೂರು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿಕೆ ನೀಡಿದ ಬಳಿಕ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಕೆಯಾಗಿದೆ.ನಿಸಾರ್ ಅಹಮದ್ ಅವರು ಸರಳ ಜೀವಿ ನಮ್ಮ ಧರ್ಮವನ್ನು ಗೌರವಿಸಿ ಒಪ್ಪಿದ್ದರು ಆದರೆ ಭಾನು ಮುಸ್ತಾಕ್ ಮೂರ್ತಿ ಪೂಜೆ ಒಪ್ಪುತ್ತಾರಾ ಹೇಳಲಿ ಎಂದು ಮೈಸೂರಿನಲ್ಲಿ ಹಿಂದೂ ಜಾಗರಣೆ ಕಾರ್ಯಕರ್ತರ ಸದಸ್ಯರ ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular