Thursday, March 20, 2025
Flats for sale
Homeರಾಜ್ಯಮೈಸೂರು : ನಂಜನಗೂಡು ಪಟ್ಟಣದಲ್ಲಿ 14 ಸಾವಿರಕ್ಕೆ ಹೆಣ್ಣು ಮಗು ಮಾರಾಟ,ಅಂಗನವಾಡಿ ಕಾರ್ಯಕರ್ತೆಯಿಂದ ಗಂಭೀರ ಆರೋಪ..!

ಮೈಸೂರು : ನಂಜನಗೂಡು ಪಟ್ಟಣದಲ್ಲಿ 14 ಸಾವಿರಕ್ಕೆ ಹೆಣ್ಣು ಮಗು ಮಾರಾಟ,ಅಂಗನವಾಡಿ ಕಾರ್ಯಕರ್ತೆಯಿಂದ ಗಂಭೀರ ಆರೋಪ..!

ಮೈಸೂರು : 14 ಸಾವಿರಕ್ಕೆ ಹೆಣ್ಣು ಮಗು ಮಾರಾಟ ಮಾಡಿದ ಘಟನೆ
ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ನೀಲಕಂಠನಗರದಲ್ಲಿ ನಡೆದಿದೆ.

ಅನಿಲ್ ಕುಮಾರ್ ಹಾಗೂ ಸೌಮ್ಯ ಎಂಬ ದಂಪತಿಗೆ ಸೇರಿದ ಮಗುವನ್ನ ಮಾರಾಟ ಮಾಡಿರುವ ಆರೋಪ ಕೇಳಿಬಂದಿದ್ದು ದಂಪತಿಗೆ ಹುಟ್ಟಿದ ಮೂರು ಮಕ್ಕಳೂ ಹೆಣ್ಣಾದ ಕಾರಣ ಮೂರನೇ ಮಗು ಅಮೂಲ್ಯಳನ್ನು ಮಾರಾಟ ಮಾಡಿರುವ ಮಾಹಿತಿ ದೊರೆತಿದೆ.

ಗುಂಡ್ಲುಪೇಟೆ ನಿವಾಸಿಯೊಬ್ಬರಿಗೆ ಹೆಣ್ಣು ಮಗು ಮಾರಾಟ ಮಾಡಿರುವ ಸೌಮ್ಯ ಪೋಷಕರು ಬಳಿಕ ಬೆಳಕಿಗೆ ಬಂದಿದೆ‌

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಮಗು ಮಾರಾಟ ಆಗಿದೆ ಎಂಬ ಮಾಹಿತಿ ಅಂಗನವಾಡಿ ಕಾರ್ಯಕರ್ತೆ ಲಾವಣ್ಯ ಎಂಬುವರಿಗೆ ದೂರು ನೀಡಿದ್ದು ಕೂಡಲೇ ಲಾವಣ್ಯ ರವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯ ಮುಖಂಡರಾದ ಅನಂತ್ ರವರಿಗೆ ಮಾಹಿತಿ ಅಧಿಕಾರಿಗಳು‌‌ ತಿಳಿಸಿದ್ದು ಅನಂತ್ ಮಗುವನ್ನ ಖರೀದಿಸಿದವರನ್ನ ಸಂಪರ್ಕಿಸಿದಾಗ 14 ಸಾವಿರಕ್ಕೆ ಮಗು ಮಾರಾಟ ಮಾಡಿರುವುರು ಬೆಳಕಿಗೆ ಬಂದಿದೆ.ನಮಗೆ ನಮ್ಮ ಹಣ ಕೊಟ್ಟರೆ ಮಗು ಕೊಡುವುದಾಗಿ ತಿಳಿಸಿದ ಮಗು ಖರೀದಿ ಮಾಡಿದ ಪೋಷಕರು. ಮೊದಲು ಮಗುವನ್ನ ತಂದು ಕೊಡಿ ನಂತರ ಹಣದ ವಿಚಾರ ಮಾತನಾಡೋಣ ಎಂದು ಅನಂತ್ ಹೇಳಿದ್ದಾರೆ. ಅನಂತ್ ಮಾತಿಗೆ ಗುಂಡ್ಲುಪೇಟೆ ಪೋಷಕರು ಮಗು ವಾಪಸ್ ತಂದು ಕೊಟ್ಟಿದ್ದು ಮಗು ವಾಪಸ್ ಬಂದ ನಂತರ ನಂಜನಗೂಡು ಪೊಲೀಸರು ಎಂಟ್ರಿ ಯಾಗಿದ್ದಾರೆ.

ಅಭಿವೃದ್ದಿ ಯೋಜನೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾರಾಟವಾದ ಮಗುವನ್ನ ವಶಕ್ಕೆ ಪಡೆದಿದ್ದು ಮಗುವನ್ನ ಮೈಸೂರಿನಲ್ಲಿರುವ ಶಿಶುಪಾಲನಾ ಕಚೇರಿ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ.

ಯಾರ ವಿರುದ್ಧವೂ ದಾಖಲಾಗದ ಪ್ರಕರಣ?

ಯಾರ ವಿರುದ್ದವೂ ಇದುವರೆಗೆ ಪ್ರಕರಣ ದಾಖಲಿಸದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಗುವನ್ನ ಮಾರಾಟ ಮಾಡಿದವರಾಗಲಿ, ಮಧ್ಯವರ್ತಿಯಾಗಲಿ ಅಥವಾ ಖರೀದಿಸದವರನ್ನಾಗಲಿ ವಶಕ್ಕೆ ಪಡೆದಿಲ್ಲ. ಕೇವಲ ಮಧ್ಯವರ್ತಿಗಳಂತೆ ವರ್ತಿಸಿ ಆರೋಪಿಗಳನ್ನ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular