ಮೈಸೂರು ; ಕಪಿಲ ನದಿಯ ಸೇತುವೆ ಮಟ್ಟದಲ್ಲಿ ಹರಿಯುತ್ತಿರುವ ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಪಿಲ ನದಿಯ ಸ್ಥಾನಘಟ್ಟದ ಬಳಿ ತೆರಳದಂತೆ ತಾಲೂಕು ಆಡಳಿತವರ್ಗ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಮೈಸೂರು ನಂಜನಗೂಡು ಮುಖ್ಯ ರಸ್ತೆಯ ನೂರು ವರ್ಷಗಳ ಹಳೆಯ ದೇವರಾಜ ಅರಸು ಸೇತುವೆ ತುತ್ತ ತುದಿಯಲ್ಲಿ ಬಾರಿ ಪ್ರಮಾಣದ ಪ್ರವಾಹದ ನೀರು ಹರಿಯುತ್ತಿದ್ದು ಈಗಾಗಲೇ ಕಬಿನಿ ನಾಲೆಯಿಂದ ಒಟ್ಟಾರೆಯಾಗಿ ಕಪಿಲ ನದಿಗೆ 36,000 ಕ್ಯೂಸಕ್ಸ್ ನೀರನ್ನು ಹೊರ ಬಿಡಲಾಗಿದೆ.
ನಂಜನಗೂಡು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ, ನಂಜುಂಡೇಶ್ವರನ ದೇವಾಲಯದ ಸ್ಥಾನಘಟ್ಟ, ಹದಿನಾರು ಕಾಲು ಮಂಟಪ ಶೇಕಡ 90ರಷ್ಟು ಮುಳುಗಡೆಯಾಗಿದೆ. ದೇವಾಲಯದ ಹಿಂಬದಿಯಲ್ಲಿರುವ ತಗ್ಗು ಪ್ರದೇಶಗಳಾದ ತೋಪಿನ ಬೀದಿ, ಒಕ್ಕಲ ಗೇರಿ, ಹಳ್ಳದ ಕೇರಿ, ರಾಯರ ಮಠ, ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಪ್ರವಾಹದ ನೀರು ನುಗುವ ಆತಂಕ ಎದುರಾಗಿದೆ.
ನಂಜನಗೂಡಿನ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ತಗುಪ್ರದೇಶದ ಜನ ವಸತಿ ಪ್ರದೇಶಕ್ಕೆ ತೆರಳಿ ಈಗಾಗಲೇ ಎಚ್ಚರಿಕೆಯ ಸಂದೇಶಗಳನ್ನ ನೀಡಲಾಗಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಜನಜನವಾರುಗಳ ರಕ್ಷಣೆಗಾಗಿ ಸ್ಥಳಾಂತರವಾಗಬೇಕು ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ನಂಜನಗೂಡಿನ ಶಾಸಕ ದರ್ಶನ್ ದ್ರುವ ನಾರಾಯಣ್ ರವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಬೊಕ್ಕಳ್ಳಿ,ಹೆಜ್ಜೆಗೆ, ಹುಲ್ಲಹಳ್ಳಿ, ಮಹದೇವ ತಾತ ಗದ್ದಿಗೆಯ ಸಂಗಮ ಇವು ಕಪಿಲಾ ನದಿಯ ಹಂಚಿನಲ್ಲಿರುವ ಪ್ರದೇಶಗಳಾಗಿವೆ ಕೂಡಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ಜನ ಜನವಾರು ರಕ್ಷಣೆಗೆ ಮುಂದಾಗಬೇಕು ಎಂದು ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ತಗ್ಗು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಆತಂಕ ಸೃಷ್ಟಿ ಮಾಡಿದರೆ ಯಾವುದೇ ಜೀವ ಹಾನಿ ಸಂಭವಿಸದ ಹಾಗೆ ಸಂರಕ್ಷಿಸುವ ಸಲುವಾಗಿ ಗಂಜಿ ಕೇಂದ್ರಗಳನ್ನ ತೆರೆಯಲಾಗುವುದು.ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ರೀತಿಯ ತೊಂದರೆ ಇಲ್ಲದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಹಸಿಲ್ದಾರ್ ಶಿವಕುಮಾರ್ ಕಾಸನೂರು ಸಂದರ್ಭದಲ್ಲಿ ತಿಳಿಸಿದರು.