ಮೈಸೂರು : ಹಿಂದೂಗಳು ಜನಸಂಖ್ಯೆ ನಿಯಂತ್ರಣವನ್ನು ಪಾಲಿಸುತ್ತಿದ್ದಾರೆ. ಪರಿಣಾಮ ಹಿಂದುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮುಸ್ಲಿಮರು ಜನಸಂಖ್ಯೆ ನಿಯಂತ್ರಣ ನಿಯಮಗಳನ್ನು ಪಾಲಿಸದ ಕಾರಣ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ದೇಶದ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವಂತಹ ಏಕರೂಪ ನಾಗರೀಕ ಸಂಹಿತೆ ಜಾರಿಯಾಗಬೇಕು. ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ಭಾಯಿ ತೊಗಾಡಿಯಾ ಮೈಸೂರಿನಲ್ಲಿ ಹೇಳಿದ್ದಾರೆ.
ಹಿಂದೂ ದಂಪತಿ 3 ಮಕ್ಕಳನ್ನು ಪಡೆದರೆ ಪ್ರಬಲ, 2 ಮಕ್ಕಳನ್ನು ಪಡೆದರೆ ದುರ್ಬಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಹಾಗು ಪ್ರಖರ ಹಿಂದುತ್ವವಾದಿ ಪ್ರವೀಣ್ ಭಾಯಿ ತೊಗಾಡಿಯಾ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಅಂತರರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ ಬಜರಂಗದಳದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಆಲಮ್ಮ ಛತ್ರದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಚಿಂತನಾ ಸಭೆಯಲ್ಲಿ ಮಾತನಾಡಿದ ಪ್ರವೀಣ್ ಭಾಯಿ ತೊಗಾಡಿಯಾ ಭಾಗವಹಿಸಿದ್ದು 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಹಿಂದೂಗಳ ಜನಸಂಖ್ಯೆ 86% ಇತ್ತು. ಮುಸ್ಲಿಮರ ಸಂಖ್ಯೆ 6% ಇತ್ತು.ಇದೀಗ ಹಿಂದೂಗಳ ಜನಸಂಖ್ಯೆ 79% ಕ್ಕೆ ಕುಸಿತವಾಗಿದೆ. ಮುಸ್ಲಿಮರ ಸಂಖ್ಯೆ 15% ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಇದೇ ರೀತಿ ಮುಂದುರವರೆದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗಲಿದೆ. ಹಿಂದೂಗಳು ಬಹುಸಂಖ್ಯಾರಾಗಿ ಇರುವವರೆಗೂ ಸುರಕ್ಷಿತವಾಗಿರುತ್ತಾರೆ.ಹಿಂದೂಗಳು ಅಲ್ಪಸಂಖ್ಯಾತರಾದರೆ ಅಪಾಯ ಎದುರಾಗಲಿದೆ. ಹಾಗಾಗಿ ಹಿಂದೂ ದಂಪತಿಗಳು 3 ಮಕ್ಕಳನ್ನು ಪಡೆಯಬೇಕು. 3 ಮಕ್ಕಳನ್ನು ಪಡೆದರೆ ಹಿಂದೂಗಳು ಪ್ರಬಲವಾಗುತ್ತಾರೆ. 2 ಮಕ್ಕಳನ್ನು ಪಡೆದರೆ ದುರ್ಬಲರಾಗುತ್ತಾರೆ ಎಂದು ಪ್ರವೀಣ್ ಭಾಯಿ ತೊಗಾಡಿಯಾ ವಿಶ್ಲೇಷಿಸಿದ್ದಾರೆ.