ಮೈಸೂರು : ಕುಡಿದ ಮತ್ತಿನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಂಪಾಟ ವಾಡಿ ಘಟನೆ ಸಾರ್ವಜನಿಕರ ಜೊತೆ ಮಾತಿನ ಚಕಮಕಿ ನಡೆದ ಘಟನೆ ಮೈಸೂರಿನ ಗಾಯತ್ರಿಪುರಂ ಬಳಿ ನಡೆದಿದೆ.

ರಿಸರ್ವ್ ಸಬ್ ಇನ್ಸ್ಪೆಕ್ಟರ್ ಬಾಬುಸಾವ್ ಕುಡಿದು ಗಲಾಟೆ ಮಾಡಿರುವ ಇನ್ಸ್ಪೆಕ್ಟರ್ ಎಂದು ತಿಳಿದಿದೆ. ಕುಡಿದ ಅಮಲಿನಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಹಾಗೂ ಸಾರ್ವಜನಿಕರು ಪೋಲೀಸರ ನಡುವೆ ವಾಗ್ವಾದ ಉಂಟಾಗಿದೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಕುಡಿದ ಅಮಲಿನಲ್ಲಿದ್ದ ಇನ್ಸ್ಪೆಕ್ಟರ್ ನ್ನ ಪೊಲೀಸ್ ವಾಹನದಲ್ಲಿ ಕರೆದೋಯ್ದಿದ್ದಾರೆ . ಪೊಲೀಸಪ್ಪನ ರಂಪಾಟವನ್ನ ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.