ಮೈಸೂರು ; ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಅತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ಕುಶಾಲ್( 15,) ಚೇತನ್( 45), ರೂಪಾಲಿ (43), ಪ್ರಿಯಂವದ 65 ಎಂದು ತಿಳಿದುಬಂದಿದೆ.
ಮೈಸೂರಿನ ವಿಶ್ವೇರಯ್ಯನಗರದ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು ಮೊದಲು ಚೇತನ್ ತನ್ನ ತಾಯಿ,ಪತ್ನಿ ಮಗನಿಗೆ ವಿಷ ಉಣಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ನಂತರ ತಾನು ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಇಡೀ ಕುಟುಂಬದ ಸಾವಿಗೆ ಕಾರಣ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಮಾಹಿತಿ ದೊರೆತಿದೆ. ಸಾಲದ ಸುಳಿಯಲ್ಲಿ ನರಳಾಡುತ್ತಿದ್ದ ಚೇತನ್ ಸಂಸಾರ ವಿದೇಶದಿಂದ ಬಳಿಕ ಬದುಕು ಕಟ್ಟಿಕೊಳ್ಳಲು ಪರದಾಟ ನಡೆಸುತ್ತಿದ್ದು ಕೋವಿಡ್ ಸಂಕಷ್ಟದಿಂದ ಹೊರಬರಲಾಗದೆ ಹೆಣಗಾಟದಿಂದ ತನ್ನ ಕುಟುಂಬವನ್ನ ಮೇಲೆತ್ತಲು ಹರಸಾಹಸ ಪಡುತ್ತಿದ್ದರೆಂದು ತಿಳಿದಿದೆ. ಡೆತ್ ನೋಟ್ ನಲ್ಲಿ ಸಾವಿಗೆ ಕಾರಣವಾದ ಅಂಶಗಳ ಉಲ್ಲೇಖಸಿದ್ದಾರೆ.
ಮಗ ಕುಶಾಲ್ ಮೊನ್ನೆಯಷ್ಟೇ ಎಸ್ ಎಸ್ ಎಲ್‌ಸಿ ಪರೀಕ್ಷೆ ಬರೆದಿದ್ದು ಬಳಿಕ ಮನೆಗೆ ಮರಳಿದ್ದಾರೆ ನೆನ್ನೆ ಕುಟುಂಬ ಸಮೇತ ದೇವಾಲಯಕ್ಕೆ ತೆರಳಿದ್ದು ಕುಶಾಲ್ ಮುಂದಿನ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳುತ್ತಿದ್ದರೆಂದು ತಿಳಿದಿದೆ.
ಗುರುವಾರ ಮತ್ತೊಂದು ಪರೀಕ್ಷೆ ಎದುರಸಿಬೇಕಿದ್ದ ಕುಶಾಲ್ ವಿಜ್ಞಾನ ವಿಷಯದ ತಯಾರಿ ನಡೆಸುತ್ತಿದ್ದರು.
ಸಾಯುವ ಮುನ್ನ ಸಹೋದರನಿಗೆ ದೂರದ ಅಮೇರಿಕಾದ ತಮ್ಮಭರತ್ ಗೆ ಫೋನ್ ಮೂಲಕ ಸಂದೇಶ ರವಾನಿಸಿದ್ದು ನಾವು ಬದುಕುಳಿಯುವುದಿಲ್ಲ, ಕ್ಷಮಿಸುಬಿಡು ಅಂತ ಮೆಸೇಜ್ ಹಾಕಿದ್ದಾರೆ. ಏನಾಗಿದೆ ಅಂತ ಭರತ್ ಕೇಳುವ ಮುನ್ನವೇ ಕರೆ ಕಟ್ ಮಾಡಿದ್ದು ದುಃಖ, ದುಗುಡದಿಂದಲೇ ಕರೆ ಮಾಡಿ ಮಾತನಾಡಿರುವ ಭರತ್ ಚೇತನ್ ನಡವಳಿಕೆ ಮೇಲೆ ಅನುಮಾನಗೊಂಡಿದ್ದು
ಭರತ್ ಭಾರತದ ತನ್ನ ಸಂಬಂಧಿಕರು,ಗೆಳೆಯರ ಸಂಪರ್ಕ ಅಪಾರ್ಟ್‌ಮೆಂಟ್ ಬಳಿ ತಕ್ಷಣ ತೆರಳುವಂತೆ ಹಲವರಿಗೆ ಮನವಿ ಮಾಡಿದ್ದರು ಆದರೆ ಆಪ್ತರು ಬರುವ ಮುನ್ನವೇ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಮಾಹಿತಿ ದೊರೆತಿದೆ.