ಮೈಸೂರು : ಬೆಟ್ಟದಪುರ ಗ್ರಾಮದ ಸುಣ್ಣದಬೀದಿಯಲ್ಲಿ ಗೃಹಿಣಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳ ಕತ್ತನ್ನು ಚಾಕುವಿಂದ ಕುಯ್ದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗ ಶನಿವಾರ ನಡೆದಿದೆ.
ಇಲ್ಲಿನ ನಿವಾಸಿ ಜಮೃದ್ ಷರೀಫ್ ಎಂಬುವರ ಮಗಳಾದ ಆರ್ಬಿಯಾ ಭಾನು(25), ಅನಂ ಫಾತೀಮಾ (2) ಮತ್ತು ನವಜಾತ ಶಿಶು (8 ದಿನ) ಮೃತರು.
ಆರ್ಬಿಯಾ ಭಾನು ಸಮೀಪದ ಅರೇನಹಳ್ಳಿ ಗ್ರಾಮದ ಸೈಯದ್ ಮುಸಾವೀರ್ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. ಆರ್ಬಿಯಾ ತನಗೆ ಹಿರಿಯ ಮಗು ಹೆಣ್ಣಾಗಿದ್ದು, ಅಂಗವಿಕಲೆ ಆಗಿರುತ್ತಾಳೆ ಮತ್ತು ಕಿರಿಯ ಮಗು ಕೂಡ ಹೆಣ್ಣು ಮಗು ಆಗಿದೆ ಎಂದು ಬೇಸರಗೊಂಡು, ಇಬ್ಬರು ಮಕ್ಕಳನ್ನು ಚಾಕುವಿನಿಂದ ಕತ್ತು ಕೂಯ್ದು ಕೊಲೆ ಮಾಡಿ ನಂತರ ತಾನು ಸಹ ಕತ್ತನ್ನು ಕೂಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು, ಮೃತ ತಂದೆ ಜಮೃದ್ ಷರೀಫ್ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ.ಮಲ್ಲಿಕ್, ಸರ್ಕಲ್ ಇನ್ಸ್ಪೆಕ್ಟರ್ ದೀಪಕ್, ತಹಶೀಲ್ದಾರ್ ನಿಸರ್ಗಪ್ರಿಯ, ಪಿಎಸ್ಐ ಅಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.


