ಮೈಸೂರು : ಮೂರನೇ ದಿನವೂ ಸಹ ಇನ್ಫೋಸಿಸ್ ಆವರಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ, ಇದುವರೆಗೆ ಚಿರತೆ ಚಲನವಲನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಸೆರೆಹಿಡಿಯುವ ಕಾರ್ಯಪಡೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಉಪ
ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ೩೫೦ ಎಕರೆ ವಿಸ್ತೀರ್ಣದ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಡಿ.೩೧ರಂದು ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಸೆರೆಗೆ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ,
ಸಿಬ್ಬಂದಿ ಸೇರಿ ಮೈಸೂರು ಅರಣ್ಯ ಇಲಾಖೆಯ ಒಟ್ಟು 80 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದೆ, ಇನ್ಫೋಸಿಸ್ ಕ್ಯಾಂಪಸ್ನ ಸಿಸಿಟಿವಿಯಲ್ಲಿ ಮಾತ್ರ ಚಿರತೆ ಕಾಣಿಸಿಕೊಂಡಿದೆ. ಆದರೆ, ಅರಣ್ಯ ಇಲಾಖೆಯ ಡ್ರೋನ್ ಕ್ಯಾಮೆರಾ, ಟೈರೋಪ್ ಕ್ಯಾಮೆರಾ, ಕ್ಯಾಂಪಸ್ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಅಥವಾ ಹೆಜ್ಜೆಗುರುತುಗಳು ಪತ್ತೆಯಾಗಿಲ್ಲ,
ಚಿರತೆ ಸೆರೆಗೆ ಚಿರತೆ ಕಾರ್ಯಪಡೆಗಳು ಮತ್ತು ಟೈರೋಪ್ ಕ್ಯಾಮೆರಾಗಳನ್ನು ಮುಂದುವರೆಸಲಾಗಿದೆ. ಇದರೊಂದಿಗೆ ಕ್ಯಾAಪಸ್ನ ಅಕ್ಕಪಕ್ಕದ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎAದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಚಿರತೆ ಹಾವಳಿಯಿಂದ ಜನತೆ ಭಯಭೀತರಾಗಿದ್ದಾರೆ.