ಮೈಸೂರು : ಆಷಾಡ ಶುಕ್ರವಾರ ಹಿಂದೂಗಳಿಗೆ ವಿಶೇಷ ದಿನ.ಅದರಂತೆಯೇ ತಾಯಿ ಚಾಮುಂಡೇಶ್ವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನಡೆದಿದೆ. ಬೆಳಿಗ್ಗೆ 6ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ್ದು ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆದಿದ್ದಾರೆ.



ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಮಿಸ್ರಿಗೆ ಭಕ್ತರು ಆಗಮಿಸಿದ್ದು ಗುಲಾಭಿ,ತೆಂಗಿನಗರಿ, ಭತ್ತದ ತೆನೆ ಮೂಲಕ ವಿವಿಧ ಬಗೆಯ ಹೂಗಳಿಂದ ದೇವಸ್ಥಾನವ ಗರ್ಭಗುಡಿ ಅಲಂಕಾರ ಮಾಡಲಾಗಿದೆ.
ಲಕ್ಷ್ಮಿ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿಕಂಗೊಳಿಸುತ್ತಿದ್ದು ನೂಕು ನುಗ್ಗುಲು ಉಂಟಾಗದ ರೀತಿಯಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆ ಜರುಗದಂತೆ ಪೊಲೀಸ್ ಭದ್ರತೆ ನೀಯೋಜಿಸಿದ್ದು 2000,ರೂ.ಯಿಂದ 300 ವರೆಗೆ ಟಿಕೆಟ್ ಖರೀದಿ ಮಾಡಿ ಬರುವವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಧರ್ಮ ದರ್ಶನ ಹಾಗೂ ಮೆಟ್ಟಿಲುಗಳ ಮೂಲಕವು ಬೆಟ್ಟಕ್ಕೆ ಭಕ್ತರು ಬರುತ್ತಿದ್ದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇದ ಮಾಡಲಾಗಿದೆ. ಲಲಿತಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ವ್ಯವಸ್ಥೆ ಆಯೋಜಿಸಿದು ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ.