ಮೂಡಬಿದಿರೆ : ಮೂಡಬಿದಿರೆಯ ಮಿಜಾರು ಎಂಬ ಹಳ್ಳಿಯಲ್ಲಿ ಶತಮಾನದ ಇತಿಹಾಸವಿರುವ ಈ ಶಾಲೆಯಲ್ಲಿ ಮೂಲಸೌಕರ್ಯಳಿಗಿಲ್ಲ.
ಈ ಶೈಕ್ಷಣಿಕ ವರ್ಷದಲ್ಲಿ1 ರಿಂದ 7 ರವರೆಗೆ 318 ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 90 ಹೀಗೆ ಒಟ್ಟು 402 ವಿದ್ಯಾರ್ಥಿಗಳಿದ್ದಾರೆ. ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಕನಿಷ್ಠ 16 ತರಗತಿ ಕೋಣೆಗಳಿರಬೇಕು. ಆದರೆ ಇಲ್ಲಿರುವುದು 10 ಕೋಣೆಗಳು ಮಾತ್ರ. ಹೀಗಾಗಿ ಅಡುಗೆ ಕೋಣೆ, ಬಯಲು ರಂಗಮಂಟಪ, ಕ್ರೀಡಾ ಸಾಮಗ್ರಿ ಕೊಠಡಿಗಳಲ್ಲಿ ಮಕ್ಕಳು ಡೆಸ್ಕ್ ಬೆಂಚ್‌ಗಳಿಲ್ಲದೆ ನೆಲದಲ್ಲಿಯೇ ಕುಳಿತು ಪಾಠ ಕೇಳಬೇಕು.ಸೋರುತ್ತಿರುವ ಶಾಲೆಯ ಮೇಲ್ಚಾವಣಿ, ಶಾಲೆಯ ಹೊರಭಾಗದ ಖಾಲಿ ಸ್ಥಳದಲ್ಲೇ ಅಡುಗೆ ತಯಾರಿ, ಮಳೆಗಾಲದಲ್ಲಿ ಶಾಲೆಯ ವರಾಂಡದಲ್ಲಿ ಅಡುಗೆ ಮಾಡುವ ಅನಿವಾರ್ಯತೆ.
ಇಷ್ಟು ಚಿಕ್ಕ ಜಾಗದಲ್ಲಿಅಡುಗೆ ಮಾಡುವುದು ಅಸಾಧ್ಯವಾದ ಕಾರಣ ಈಗ ಹೊರಗಡೆ ಖಾಲಿ ಸ್ಥಳದಲ್ಲಿ ಅಡುಗೆ ತಯಾರಿ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿಶಾಲಾ ವರಾಂಡಕ್ಕೆ ವರ್ಗಾಯಿಸಲಾಗುತ್ತದೆ. 400 ಮಕ್ಕಳಿರುವ ಶಾಲೆಯಲ್ಲಿ13 ಶೌಚಾಲಯಗಳಿವೆ. ಇವುಗಳನ್ನು ದುರಸ್ತಿ ಪಡಿಸಿದ್ದರೂ ಶೌಚಾಲಯದ ಸಮಸ್ಯೆ ತೀವ್ರವಾಗಿದೆ.ಈ ಶಾಲೆಗೆ ಕೇಳೋಗತಿಯಿಲ್ಲದಂತಾಗಿದೇ .ಸಂಬಂಧ ಪಟ್ಟ ಅಧಿಕಾರಿಗಳು ಬೇಟಿ ನೀಡಿ ಸರಿಯಾದ ಮೂಲ ಸೌಕರ್ಯ ಉತ್ತಮ