Thursday, March 12, 2026
Flats for sale
Homeಜಿಲ್ಲೆಮೂಡಬಿದರೆ : ಯುವತಿಯನ್ನು ಪ್ರೀತಿಸುವಂತೆ ಬೆದರಿಕೆ : ನಡು ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆ, ಅನ್ಯಕೋಮಿನ...

ಮೂಡಬಿದರೆ : ಯುವತಿಯನ್ನು ಪ್ರೀತಿಸುವಂತೆ ಬೆದರಿಕೆ : ನಡು ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆ, ಅನ್ಯಕೋಮಿನ ಯುವಕನ ಬಂಧನ ..!

ಮೂಡಬಿದರೆ : ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆಯಲ್ಲಿ ಗುರುವಾರ ರಾತ್ರಿ 8:00 ಗಂಟೆಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೊಬ್ಬಳಿಗೆ ನಡು ರಸ್ತೆಯಲ್ಲಿ ಅಡ್ಡ ಹಾಕಿ ಹಲ್ಲೆಗೈದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

ಬಂಧಿತ ಆರೋಪಿ ಇರುವೈಲಿನ ಅರ್ಶದ್ (21) ಎಂದು ತಿಳಿದುಬಂದಿದೆ.

ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆ ರಸ್ತೆಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸಮಾಡುತ್ತಿದ್ದ ಯುವತಿಗೆ ಅಲ್ಲಿನ ಸಮೀಪದ ಕೋಟೆಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅರ್ಶದ್ ಪದೇ ಪದೇ ಬಂದು ಪ್ರೀತಿಸುವಂತೆ ನಾಟಕವಾಡುತಿದ್ದ. ಬಳಿಕ ಪರಿಚಯವಾಗಿ ಅವರಿಬ್ಬರ ನಡುವೆ ಹಲವು ಬಾರಿ ಫೋನ್ ಸಂಭಾಷಣೆ ನಡೆದಿತ್ತೆಂಬ ವಿಚಾರವೂ ತಿಳಿದುಬಂದಿದೆ ಇದನ್ನು ತಿಳಿದ ಮನೆಯವರು ಆಕೆಯನ್ನು ಕೆಲಸಕ್ಕೆ ಕಳುಹಿಸಿದೇ ಮನೆಯಲ್ಲಿ ಇರಿಸಿದ್ದರು.

ಈ ವಿಚಾರ ತಿಳಿದು ಮನೆಯವರು ಯುವತಿಯನ್ನು ಸಹೋದರಿಯ ಮನೆಗೆ ಹೆತ್ತವರು ಕಳುಹಿಸಿಕೊಟ್ಟಿದ್ದರು. ಆದರೆ ಕೆಲ ದಿನಗಳ ಬಳಿಕ ಆಕೆ ಊರಿಗೆ ಹಿಂದಿರುಗಿದ್ದು ಮೂಡಬಿದರೆ ಪೇಟೆಗೆ ಬಂದು ಟೈಲರ್ ಅಂಗಡಿ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅರ್ಶದ್ ಯುವತಿಯನ್ನು ಅಡ್ಡಗಟ್ಟಿಮೊಬೈಲ್ ಕರೆ ಸ್ವೀಕರಿಸದೇ ನಿರ್ಲಕ್ಷ್ಯ ತೋರುತ್ತಿರುವ ಹಾಗೂ ತನ್ನನ್ನು ತಿರಸ್ಕರಿಸುತ್ತಿರುವ ಕುರಿತು ಅಕ್ಷೇಪ ವ್ಯಕ್ತ ಪಡಿಸಿದ ಆರೋಪಿ ಅರ್ಶದ್ ಸಾರ್ವಜನಿಕ ರಸ್ತೆಯಲ್ಲಿ ಯುವತಿಗೆ ಹಲ್ಲೆ ನಡೆಸಿ ಧಮ್ಕಿ ಹಾಕಿದ್ದಾನೆ.

ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವತಿಗೆ ಅಗತ್ಯ ರಕ್ಷಣೆ ನೀಡಲು ಪೊಲೀಸರು ಬದ್ದರೆಂದು ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ.ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular