ಮೂಡಬಿದರೆ : ಎಡಪದವು ಬಳಿ ಯುವಕನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ .

ಬಂಧಿತರನ್ನು ಬಂದರಿನ ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್ ಹಾಗೂ ಅಕ್ರಮ್ ,ಸಾಧಿಕ್ ಎಂದು ತಿಳಿದುಬಂದಿದೆ.ಸಿನಾನ್ ರೌಡಿಶೀಟರ್ ಆಗಿದ್ದು ಅನೇಕ ಅಪರಾಧದಲ್ಲಿ ಭಾಗಿಯಾಗಿದ್ದನು,ಇರ್ಷಾದ್ ಬೆಂಗಳೂರಿನಲ್ಲಿ ಬೈಕ್ ಕಳವು ಪ್ರಕರಣದಲ್ಲಿ ಬಂಧಿಸಿದ್ದು ಬೇಲ್ ಮೂಲಕ ಕೆಲ ದಿನಗಳ ಹಿಂದ ಹೊರಬಂದಿದ್ದನೆಂದು ಮಾಹಿತಿ ದೊರೆತಿದೆ.
ಬಂದಿತರು ನಶೆಯ ಅಮಲಿನಲ್ಲಿ ಮಾರಕಾಸ್ರ್ತಗಳನ್ನು ಬೈಕಿನಲ್ಲಿ ಪ್ರದರ್ಶಿಸುತ್ತ ಹೋಗುತ್ತಿರುವ ಸಂದರ್ಭದಲ್ಲಿ ಯುವಕ ಅಖಿಲೇಶ್ ಕಂಡಿದ್ದು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿರುತ್ತಾನೆ,ಆದರೆ ಅಪರಾಧಿಗಳ ವಿಚಾರ ತಿಳಿಯದೆ ಬೈಕ್ ಓವರ್ ಟೆಕ್ ಮಾಡಿ ವಿಡಿಯೋ ಮಾಡಿದ್ದ ಇದರಿಂದ ನಶೆಯ ಅಮಲಿನಲ್ಲಿದ್ದ ಯುವಕರು ದಾಳಿ ನಡೆಸಿದ್ದಾರೆ.
ಅರೋಪಿಗಳನ್ನು ಬಜಪೆ ಪೋಲಿಸರು ಬಂಧಿಸಿದ್ದು ತಪಸಣೆಗಾಗಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.


