ಮುಲ್ಕಿ : ಮಂಗಳೂರಿನ ಮಹಾನಗರ ಪಾಲಿಕೆ ವ್ಯಾಪ್ತಿಯ ತುಂಬೆಯಿಂದ ಮುಲ್ಕಿ ನಗರ ಪಂಚಾಯಿತಿಗೆ ಸಂಪರ್ಕದ ಕುಡಿಯುವ ನೀರಿನ ಪೈಪು ಒಡೆದು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯ ಬಿಲ್ಲವ ಸಂಘದ ಬಳಿ ಕಳೆದ 15 ದಿನಗಳಿಂದ ಪೋಲಾಗುತ್ತಿದ್ದು ಸಮೀಪದ ಗದ್ದೆಯಲ್ಲಿ ನೀರು ತುಂಬಿದೆ,ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯತ್ ಗೆ ತಿಳಿಸಿದ್ದರೂ ಇದುವರೆಗೂ ದುರಸ್ತಿ ಕೈಗೊಂಡಿಲ್ಲ ಎಂದು ಸ್ಥಳೀಯರಾದ ವಾಸುದೇವ ಶಾಂತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿರು ಬೇಸಿಗೆಯಲ್ಲಿ ನಗರದಲ್ಲಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚುತ್ತಿದ್ದು ಈ ಸಂದರ್ಭದಲ್ಲಿ ಕಳೆದ ಕುಡಿಯುವ ನೀರು ಪೋಲಾಗುತ್ತಿರುವುದು ದುರದೃಷ್ಟಕರ. ಮುಲ್ಕಿ ನಗರ ಪಂಚಾಯತ್ ಅಧಿಕಾರಿಗಳು ಕುಡಿಯುವ ನೀರು ಪೋಲಾಗುತ್ತಿರುವುದು ಬಂದು ಪರಿಶೀಲಿಸಿದ್ದಾರೆ ವಿನಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಬೇಸಿಗೆಯಲ್ಲಿ ಕುಡಿಯುವ ನೀರು ಅಮೂಲ್ಯವಾಗಿದ್ದು ಈ ಬಗ್ಗೆ ಮುಲ್ಕಿ ನಗರ ಪಂಚಾಯತ್ ಅಧಿಕಾರಿಗಳು ಕುಡಿಯುವ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಕೃಷ್ಣ ಎಸ್ ಕಲ್ಲಾಪು ಉಪಸ್ಥಿತರಿದ್ದರು