ಮಂಗಳೂರು : ಮೂಲ್ಕಿ ಪೊಲೀಸರು ಐವರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದು, ಅವರಿಂದ 7.63 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಘು (30), ಮಂಜುನಾಥ್ (28), ಪ್ರಮೋದ್ ವಿ (23), ರವಿಕಿರಣ್ (23), ದವಲ ಸಾಬ್ (23) ಮತ್ತು ಮಂಜುನಾಥ್ (29) ಬಂಧಿತರು. ಇವರೆಲ್ಲರೂ ದಾವಣಗೆರೆ ಮೂಲದವರು. ಒಂದು ಹೋಂಡಾ ಬೈಕ್, ರಾಯಲ್ ಎನ್ಫೀಲ್ಡ್, ಒಂದು ಕಾರು, ಮಂಗಳಸೂತ್ರ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನಿಬ್ಬರು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕೊಳ್ನಾಡು ಎಂಬಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಹಾಗೂ ಸೂರ್ಯಪ್ರಕಾಶ ಎಂಬುವವರ ಬೈಕ್ ದರೋಡೆ ಮಾಡಿದ ಪ್ರಕರಣದಲ್ಲಿ ಬಂಧಿತರು ಬೇಕಾಗಿದ್ದಾರೆ.


