ಮುಂಬೈ : T-20 ವಿಶ್ವಕಪ್ ಕ್ರಿಕೆಟ್ ಗೆ ಪ್ರಶಸ್ತಿ ಗೆಲ್ಲುವ ದೃಷ್ಟಿಯಿಂದ ಭಾರತೀಯ ತಂಡವನ್ನೇನೋ ಪ್ರಕಟಿಸಲಾಗಿದೆ. ಆದರೆ ಕನ್ನಡಿಗ ಕೆ.ಎಲ್.ರಾಹುಲ್ ಸೇರಿದಂತೆ ಹಲವರನ್ನು ಆಯ್ಕೆ ಮಂಡಳಿ ಪರಿಗಣಿಸಿಲ್ಲ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್ಲವೂ ಪಕ್ಷಪಾತದಿಂದ ಕೂಡಿದೆ ಎಂದು ಮಾಜಿ ಆಯ್ಕೆಗಾರರ ತಂಡ ಕಿಡಿಕಾರಿದೆ. ಭಾರತ ತಂಡ ಪ್ರಕಟಗೊಂಡ ಬಳಿಕ, ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ತಂಡದ ಆಟಗಾರರ ಆಯ್ಕೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಕೆಲವು ಫಾರ್ಮ್ ನಲ್ಲಿರುವ ಆಟಗಾರರನ್ನು ಬಿಟ್ಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕೆಎಲ್ ರಾಹುಲ್, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ರವಿ ಬಿಷ್ಣೋಯಿ ಅವರಂತಹ ಆಟಗಾರರನ್ನು ಕೈಬಿಟ್ಟಿದ್ದಕ್ಕಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೋಪ ಹೊರಹಾಕಿದ್ದಾರೆ.
ಸಿಎಸ್ ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು 15 ಸದಸ್ಯರ ಭಾರತ ತಂಡದಿAದ ಹೊರಗಿಡಲಾಗಿದೆ ಮತ್ತು ಮೀಸಲು ಆಟಗಾರರ ಪಟ್ಟಿಯಲ್ಲೂ ಹೆಸರಿಸದ ನಂತರ ಬಿಸಿಸಿಐ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಪ್ರಸ್ತುತ ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಜರಾತ್ ಟೈಟನ್ಸ್ ನಾಯಕ ಹಾಗೂ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಕಳಪೆ ಫಾರ್ಮ್ ಅನ್ನು ಎತ್ತಿ ತೋರಿಸಿರುವ ಕೆ. ಶ್ರೀಕಾಂತ್, ಆಯ್ಕೆ ಸಮಿತಿಯನ್ನು “ಪಕ್ಷಪಾತಿ’ ಎಂದು ಗುಡುಗಿದ್ದಾರೆ.
ನಾಲ್ವರು ಮೀಸಲು ಆಟಗಾರರಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟ ಶುಭ್ಮನ್ ಗಿಲ್ ಐಪಿಎಲ್ 2024ರಲ್ಲಿ ಆಡಿದ 10 ಪಂದ್ಯಗಳಿAದ 35.56 ರ ಸರಾಸರಿಯಲ್ಲಿ 320 ರನ್ ಗಳಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ 15 ಆಟಗಾರರ ತಂಡದಲ್ಲಿ ವಿಶೇಷ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್, ಐಪಿಎಲ್ 2024 ರಲ್ಲಿ ಆಡಿದ 9 ಪಂದ್ಯಗಳಿAದ 31.12 ಸರಾಸರಿಯಲ್ಲಿ 249 ರನ್ ಗಳಿಸುವ ಮೂಲಕ ಸಾಧಾರಣ ಅಭಿಯಾನ ಹೊಂದಿದ್ದಾರೆ.
ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆಯಲು ಅರ್ಹರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಐಪಿಎಲ್ನಲ್ಲಿ ಆಡಿದ 10 ಇನ್ನಿಂಗ್ಸ÷್ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಅವರನ್ನು ಪರಿಗಣಿಸಿಲ್ಲ. ಅಲ್ಲದೆ ಆಸ್ಟೆçÃಲಿಯಾ ವಿರುದ್ಧ ಶತಕ ಬಾರಿಸಿದ್ದರು.
ಶುಭ್ಮನ್ ಗಿಲ್ ಆಯ್ಕೆಗಾರರ ಆಯ್ಕೆಯಾಗಿದೆ. ಪ್ರತಿ ಬಾರಿ ವಿಫಲವಾದರೂ ಅವಕಾಶ ಸಿಗುತ್ತದೆ. ಟೆಸ್ಟ್, ಏಕದಿನ ಹಾಗೂ T-20 ಪಂದ್ಯಗಳಲ್ಲಿ ವಿಫಲರಾದರೂ ಸ್ಥಾನ ಕಂಡುಕೊಳ್ಳುತ್ತಾರೆ. ಆಯ್ಕೆಯಲ್ಲಿ ಹೆಚ್ಚಿನ ಪಕ್ಷಪಾತವಿದೆ. ತಂಡದ ಆಯ್ಕೆಯು ಪಕ್ಷಪಾತಿ ವಿಷಯವಾಗಿದೆ ಎಂದು ಸಂದರ್ಶನದಲ್ಲಿ ಅತೃಪ್ತಿ ಹೊರಹಾಕಿದ್ದಾರೆ.
ಇನ್ನೂ ಕನ್ನಡಿಗ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ಚನಾಯಕ ಕೆ.ಎಲ್. ರಾಹುಲ್, ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊAಡಿದ್ದಾರೆ.
ಆದರೂ ರಾಹುಲ್ ಅವರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದೂ ಅಲ್ಲದೆ T-20 ವಿಶ್ವಕಪ್ ತಂಡದಲ್ಲಿ ಕರ್ನಾಟಕ ಯಾವೊಬ್ಬ ಆಟಗಾರರೂ ಇಲ್ಲ. ಈಗ ರಾಹುಲ್ ಕೂಡ ಆಯ್ಕೆಯಾಗದಿರುವುದು ಕನ್ನಡಿಗರ ತೀವ್ರ ಬೇಸರ ತರಿಸಿದೆ.
ಭಾರತ ತಂಡವು 2024 ರ T-20 ವಿಶ್ವಕಪ್ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ, ಸಹ-ಆತಿಥೇಯ ಯುಎಸ್‌ಎ, ಕೆನಡಾ ಮತ್ತು ಐರ್ಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
2007 ರT-20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಜೂನ್ 5 ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಐಸಿಸಿ T-20 ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಎಲ್ಲಕ್ಕಿAತ ಹೆಚ್ಚಾಗಿ ಎಂ.ಎಸ್. ಧೋನಿ ಬಳಿಕ ಭಾರತ ವಿಶ್ವಕಪ್ ಗೆದ್ದಿಲ್ಲ. ಈ ಬಾರಿಯ ಟೂರ್ನಿ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನು ಭಾರತ ತಂಡ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.