ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರನ ಆಗಮನವಾಗಿದೆ. ಕೇವಲ 13 ವರ್ಷದ ವೈಭವ್ ಸೂರ್ಯವಂಶಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಬರೋಬ್ಬರಿ 1.10 ಕೋಟಿ ನೀಡಿ ಖರೀದಿಸಿದೆ.
ಕೇವಲ 30 ಲಕ್ಷ ಮೂಲಬೆಲೆ ಹೊಂದಿದ್ದ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು 108 ರನ್‌ಗಳಿಸಿದ್ದಾರೆ. ಎಡಗೈ ಬ್ಯಾಟರ್ ಆಗಿರುವ ಸೂರ್ಯವಂಶಿ ಅಲ್ಲ್ರೌಂಡ್ ಆಗಿದ್ದು, ಈಗ ಕೇವಲ 13 ವರ್ಷ 243 ದಿನಗಳಷ್ಟೇ ಈತನ ವಯಸ್ಸು. ಆದರೆ, ಇಷ್ಟೊಂದು ದೊಡ್ಡ ಮೊತ್ತಕ್ಕೆ ಖರೀದಿಸಲು ರಾಜಸ್ಥಾನ ರಾಯಲ್ಸ್ ಪಡೆ ಆಸಕ್ತಿ ತೋರಿದ್ದು ಎಲ್ಲರ ಅಚ್ಚರಿಗೆ ಒಳಗಾಗಿದೆ. ಅಷ್ಟೇ ಅಲ್ಲದೇ ಈ ಬಾಲಕ ಮೇಲೆ ವಯಸ್ಸು ಮೋಸ ಮಾಡಿರುವ ಆರೋಪವೂ ಇದ್ದರೂ, ರಾಜಸ್ಥಾನ ತಂಡ ಈತನಿಗೆ ಮಣೆ ಹಾಕಿದೆ.