Thursday, March 12, 2026
Flats for sale
Homeಕ್ರೈಂಮುಂಬೈ : ಹೋಟೆಲ್ ಉದ್ಯಮಿ ಜಯ್‌ಶೆಟ್ಟಿ ಕೊಲೆ ಪ್ರಕರಣ : ಭೂಗತ ಪಾತಕಿ ಛೋಟಾ ರಾಜನ್‌ಗೆ...

ಮುಂಬೈ : ಹೋಟೆಲ್ ಉದ್ಯಮಿ ಜಯ್‌ಶೆಟ್ಟಿ ಕೊಲೆ ಪ್ರಕರಣ : ಭೂಗತ ಪಾತಕಿ ಛೋಟಾ ರಾಜನ್‌ಗೆ ಜಾಮೀನು..!

ಮುಂಬೈ : ಹೋಟೆಲ್ ಉದ್ಯಮಿ ಜಯ್‌ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್ ಸ್ಟಾರ್ ಛೋಟಾ ರಾಜನ್‌ಗೆ ಜಾಮೀನು ನೀಡಲಾಗಿದೆ.

2001 ರಲ್ಲಿ ಉದ್ಯಮಿ ಜಯ್‌ಶೆಟ್ಟಿ ಕೊಲೆ ಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲವು ಕಳೆದ ಮೇ ೩೦ರಂದು ಛೋಟಾ ರಾಜನ್‌ಗೆ ಜೀವಾವಧಿ ಶಿಕ್ಷೆ ಘೋಷಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈ ಕೋರ್ಟ್ ಛೋಟಾ ರಾಜನ್ ಮೇಲ್ಮನವಿ ಸಲ್ಲಿಸಿದ್ದ, ಜಾಮೀನು ಮಂಜೂರು ಮಾಡಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಛೋಟಾರಾಜನ್ ಕೋರಿದ್ದ. ಸದ್ಯ ಛೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ಜಾಮೀನು ಮಂಜೂರು ಮಾಡಿದೆ.

ಜಾಮೀನಿಗಾಗಿ ಒಂದು ಲಕ್ಷ ರೂ. ಭದ್ರತಾ ಬಾಂಡ್ ನೀಡಲು ಆದೇಶಿಸಲಾಗಿದೆ. ಆದರೆ ಛೋಟಾ ರಾಜನ್ ಜೈಲಿನಿಂದ ಹೊರ ಬರಲು ಸಾಧ್ಯವಿಲ್ಲ. ಏಕೆಂದರೆ ಉಳಿದ ಪ್ರಕರಣಗಳಲ್ಲೂ ಆತ ಜೈಲು ಶಿಕ್ಷೆಅನುಭವಿಸುತ್ತಿದ್ದಾನೆ.

ಜಯ್‌ಶೆಟ್ಟಿ ಯಾರು : ಕೇಂದ್ರೀಯ ಮುಂಬೈನ ಗಾಂಧೇವಿಯಲ್ಲಿ ಗೋಲ್ಡನ್ ಕ್ರೌನ್ ಎನ್ನುವ ಹೋಟೆಲ್‌ನ್ನು ನಡೆಸುತ್ತಿದ್ದರು. 2001ರ ಮೇ 4 ರಂದು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಶೂಟರ್‌ಗಳು ಜಯ್‌ಶೆಟ್ಟಿಯನ್ನು ಕೊಲೆ ಮಾಡಿದ್ದರು ಎನ್ನುವ ಆರೋಪವಿದೆ. ಇದಕ್ಕೂ ಮುನ್ನ ಛೋಟಾ ರಾಜನ್ ಗ್ಯಾಂಗ್‌ಗೆ ಸೇರಿದ ಹೇಮಂತ್ ಪೂಜಾರಿ ಎನ್ನುವ ವ್ಯಕ್ತಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ ಎಂದು ತನಿಖೆಯಲ್ಲಿ ಉಲ್ಲೇಖಿಸಲಾಗಿದೆ.

ಜಯ್‌ಶೆಟ್ಟಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನುವುದು ಪೊಲೀಸರ ವಾದವಾಗಿದೆ. ಸಧ್ಯಕ್ಕೆ ತಿಹಾರ್ ಜೈಲಿನಲ್ಲಿರುವ ಛೋಟಾ ರಾಜನ್ ಖ್ಯಾತ ಪತ್ರಕರ್ತ ಜೇ ಡೇ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular