Tuesday, October 21, 2025
Flats for sale
Homeಕ್ರೀಡೆಮುಂಬೈ : ಹೊಸ ವರ್ಷಕ್ಕೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆ,ಟೆಸ್ಟ್ ಕ್ರಿಕೆಟ್ ತಂಡಕ್ಕೆ ಬುಮ್ರಾ...

ಮುಂಬೈ : ಹೊಸ ವರ್ಷಕ್ಕೆ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ತರ ಬದಲಾವಣೆ,ಟೆಸ್ಟ್ ಕ್ರಿಕೆಟ್ ತಂಡಕ್ಕೆ ಬುಮ್ರಾ ನಾಯಕನಾಗುವ ಸಾಧ್ಯತೆ ..!

ಮುಂಬೈ : ಅಂತೂ ಇಂತು ಹೊಸ ವರ್ಷದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಹೊಸ ಪರ್ವ ಆರಂಭಕ್ಕೆ ಮುನ್ನುಡಿ ಬರೆಯಲುವೇದಿಕೆ ಸಿದ್ಧಗೊಂಡಿದೆ. ವಿಶ್ವಕಪ್ ಟೆಸ್ಟ್ ಕ್ರಿಕೆಟ್ ನಲ್ಲಿ ಫೈನಲ್ ತಲುಪುವ ಹೊಗನಸಿನೊಂದಿಗೆ ಕಾಂಗರೂಗಳ ನಾಡಿಗೆ ಪ್ರವಾಸ ಕೈಗೊಂಡಿದ್ದ ಭಾರತ ಮಕಾಡೆ ಮಲಗಿದೆ.

ಈ ಕಳಪೆ ಅಟಕ್ಕೆ ಕ್ರಿಕೆಟ್ ಪಡಸಾಲೆಯಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹೊಸ ವರ್ಷದಲ್ಲಿ ತಂಡದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಯುವ ಆಟಗಾರರು ತಂಡ ಸೇರಲಿದ್ದಾರೆ. ಕಳೆದ ವರ್ಷ ಟಿ.೨೦ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಹೊಸ ವರ್ಷದಲ್ಲಿ ಭಾರತ ತಂಡಕ್ಕೆ ಸವಾಲುಗಳು ಎದುರಾಗಿವೆ. ಏಕೆಂದರೆ ಐಸಿಸಿ ಚಾಂಪಿಯನ್ ಟ್ರೋಫಿ ಎದುರಿಗಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.

ಹೌದು ಆಸೀಸ್ ನೆಲದಲ್ಲಿ ಭಾರತೀಯ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿಲ್ಲ. ಇದಕ್ಕೆ ನಾಲ್ಕನೇ ಟೆಸ್ಟ್ ಪಂದ್ಯದ ಹೀನಾಯ ಸೋಲು ನಮ್ಮೆದುರಿಗಿದೆ. ಹೀಗಾಗಿ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರ ಮೇಲೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುವ ಒತ್ತಡಗಳು ಹೆಚ್ಚಾಗಿವೆ.

ಹೊಸ ವರ್ಷ ಉದಯವಾಗಿರುವ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿವೆ. ಇದರ ಜೊತೆಗೆ ಈ ವರ್ಷ ಅಪಾರ ನಿರೀಕ್ಷೆ ಭಾರತ ತಂಡದ ಮೇಲಿದೆ. ಭಾರತ ತಂಡಕ್ಕೆ ಹೊಸ ವರ್ಷದಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಸಹ ನಿರ್ಣಾಯಕ ವೆನಿಸಲಿದೆ.

2023 ರಲ್ಲಿ ಏಕದಿನ ವಿಶ್ವಕಪ್ ಸೋತ ಬಳಿಕ ಈಗ ಐಸಿಸಿ ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ ಭಾರತ. ಹೈ ಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಭಾರತದ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ನ್ಯೂಜೆಲೆಂಡ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿವೆ. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಅತ್ಯಂತ ನಿರ್ಣಾಯಕವೆನಿಸಿದೆ. ಸದ್ಯದ ಮಟ್ಟಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿವುದು ಕಷ್ಟವೆನಿಸಿದೆ. ಒಂದು ವೇಳೆ ಸಿಡ್ನಿ ಟೆಸ್ಟ್ ಪಂದ್ಯದಲ್ಲೂ ಸೋತರೆ ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ಫೈನಲ್ ರೇಸ್ ನಿಂದ ಹೊರಬೀಳುವುದು ನಿಶ್ವಿತ.

ಅಂತಿಮ ಪಂದ್ಯದಲ್ಲಿ ಭಾರತ ಗೆದ್ದರೆ ಶ್ರೀಲಂಕಾ ಮೇಲೆ ಅವಲಂಬಿಸಿದೆ. ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶಿಸಿ ಸೋತಿತ್ತು. ಗವಾಸ್ಕರ್ -ಬಾರ್ಡರ್ ಸರಣಿಯಲ್ಲಿ ಭಾರತ ಮುಗ್ಗರಿಸಿದೆ. ಹೀಗಾಗಿ ಸರಣಿ ಸೋಲಿನ ಭೀತಿಗೆ ಸಿಲುಕಿದೆ. ಅಂತಿಮ ಪAದ್ಯವಾದರೂ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಬೇಕಾಗಿದೆ.

ಈಗಾಗಲೇ ಆರ್. ಅಶ್ವಿನ್ ನಿವೃತ್ತಿಯಾಗಿದ್ದಾರೆ. ಆಸೀಸ್ ಪ್ರವಾಸದಲ್ಲಿ ರೋಹಿತ್ ಶರ್ಮಾ ತಿಣುಕಾಡುತ್ತಿದ್ದಾರೆ. ಮತ್ತೊಂದೆಡೆ ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಹೀಗಾಗಿ ಈ ಮೂವರು ಆಟಗಾರರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒAದಾಗಿದ್ದ ಭಾರತ ಕಳೆದ ವರ್ಷ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3-೦ ಯಿಂದ ಹೀನಾಯ ಸೋಲು ಕಂಡಿತ್ತು. ಕಾAಗರೂಗಳ ನಾಡಲ್ಲೂ ಭಾರತದ ಕಳಪೆ ಬ್ಯಾಟಿಂಗ್ ಗೆ ಬೆಲೆ ತೆತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಅನುಭವಿ ಬ್ಯಾಟರ್ ಗಳ ವೈಫಲ್ಯ ಆಸೀಸ್ ಸರಣಿಯಲ್ಲಿ ಎದ್ದು ಕಂಡಿದೆ. ಹೀಗಾಗಿ ಟೆಸ್ಟ್ ಕ್ರಿಕೆಟಿಗ ನಿವೃತ್ತಿ ಹೇಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಹಿರಿಯ ಆಟಗಾರರನ್ನು ನೇಪಥ್ಯಕ್ಕೆ ಸರಿಸಿ ಯುವ ಪ್ರತಿಭೆಗಳಿಗೆ ಮಣೆ ಹಾಕಲು ಬಿಸಿಸಿಐ ಮುಂದಾಗಿದೆ.

ರೋಹಿತ್, ವಿರಾಟ್ ಹಾಗೂ ಜಡೇಜಾ ಟಿ.20 ಮಾದರಿಯ ಕ್ರಿಕೆಟ್ ನಿಂದ ಹಿಂದೆ ಸರಿದಿದ್ದಾರೆ. ಉಳಿದ ಮಾದರಿ ಕ್ರಿಕೆಟ್ ನಿಂದ ಹಿಂದೆ ಸರಿದರೂ ಅಚ್ಚರಿಪಡಬೇಕಾಗಿಲ್ಲ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ಭಾರತ ತಂಡ ಕಟ್ಟುವುದು ಅನಿವಾರ್ಯವಾಗಿದೆ.

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪಿçÃತ್ ಬುಮ್ರಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕಪಟ್ಟ ಅಲಂಕರಿಸವುದು ಬಹುತೇಕ ನಿಶ್ಚಿತವಾಗಿದೆ. ಆಸ್ಟೆçÃಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ತಂಡ ಮುನ್ನೆಡಸಿ ಆ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದರು.ಕಾಂಗರೂಗಳ ನೆಲದಲ್ಲಿ ಅತ್ಯುತ್ತಮ ಬೌಲಿಂಗ್ಪ್ರ ದರ್ಶನದೊAದಗೆ ಅತಿವೇಗವಾಗಿ 200 ವಿಕೆಟ್ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರು.

೩೧ ವರ್ಷದ ಬೂಮ್ರಾ, ಮೊದಲ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಮೊದಲ ಪಂದ್ಯದಲ್ಲಿ ಆಸ್ಟೆçÃಲಿಯಾಕ್ಕೆ ಆಘಾತ ನೀಡಿದ್ದರು. ಇದನ್ನೆಲ್ಲ ಗಮನಿಸಿದರೆ ಬೂಮ್ರಾ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ. ಬುಮ್ರಾ ಅವರಿಗೆ ನಾಯಕ ಪಟ್ಟ ನೀಡಲು ಹಿರಿಯ ಕ್ರಿಕೆಟಿಗರು ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಬಿಸಿಸಿಐ ನಾಯಕತ್ವ ಜವಾಬ್ದಾರಿ ವಹಿಸುವ ಬಗ್ಗೆ ಮೀನಾ ಮೇಷ ಎಣಿಸುತ್ತಿದೆ. ಏಕೆಂದರೆ ಬುಮ್ರಾಈ ಹಿಂದೆ ಗಾಯಾಳು ವಾಗಿರುವುದು ಸಮಸ್ಯೆ ತಂದೊಡ್ಡಿದೆ. ಈ ಬಗ್ಗೆ ಬಿಸಿಸಿಐ ಕಾಳಜಿವಹಿಸಿದೆ. ಬುಮ್ರಾ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. ಅವರಿಗೆ ಪೂರ್ಣ ಪ್ರಮಾಣದ ನಾಯಕತ್ವ ವಹಿಸುವ ಮೊದಲು ಹಲವು ಸವಾಲುಗಳನ್ನು ಅಳೆದು ತೂಗಿ ನಾಯಕತ್ವ ಜವಾಬ್ದಾರಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.

RELATED ARTICLES

LEAVE A REPLY

Please enter your comment!
Please enter your name here

Most Popular