Monday, March 9, 2026
Flats for sale
Homeಕ್ರೀಡೆಮುಂಬೈ : ಹೊಸ ನಾಯಕ ಹಾರ್ದಿಕ್ ಪಾಂಡ್ಯನಿಗೆ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

ಮುಂಬೈ : ಹೊಸ ನಾಯಕ ಹಾರ್ದಿಕ್ ಪಾಂಡ್ಯನಿಗೆ 100 ಕೋಟಿ ರೂ. ನೀಡಿದ ಮುಂಬೈ ಇಂಡಿಯನ್ಸ್..!

ಮುಂಬೈ : ಹೊಸ ನಾಯಕ ಹಾರ್ದಿಕ್ ಪಾಂಡ್ಯನಿಗೆ ಮುಂಬೈ ಇಂಡಿಯನ್ 100 ಕೋಟಿ ರೂ. ನೀಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ .ಪ್ರೀಮಿಯರ್ ಲೀಗ್​ ಸೀಸನ್​-17 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯಲಿರುವುದು ಗೊತ್ತೇ ಇದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಟ್ರೇಡ್ ಮಾಡಿಕೊಂಡಿತ್ತು.

ಹಾರ್ದಿಕ್ ಪಾಂಡ್ಯರನ್ನು ಮಾರಾಟ ಮಾಡಲು ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತದ ಡಿಮ್ಯಾಂಡ್ ಇಟ್ಟಿದ್ದರು. ಆದರೆ ಈ ಟ್ರೇಡ್​ಗಾಗಿ ಮುಂಬೈ ಇಂಡಿಯನ್ಸ್​ ಬರೋಬ್ಬರಿ 100 ಕೋಟಿ ರೂ. ನೀಡಿದೆ ವರದಿಯಾಗಿದೆ.

ಇಲ್ಲಿ ಪಾಂಡ್ಯ ಖರೀದಿಗಾಗಿ ಮುಂಬೈ ಇಂಡಿಯನ್ಸ್ ಬರೋಬ್ಬರಿ ನೂರು ಕೋಟಿ ರೂ. ಖರ್ಚು ಮಾಡಿದ್ದು ಗುಜರಾತ್ ಟೈಟಾನ್ಸ್​ ಫ್ರಾಂಚೈಸಿ ಮುಂದಿಟ್ಟ ವರ್ಗಾವಣೆ ಶುಲ್ಕವನ್ನುಮುಂಬೈ ಇಂಡಿಯನ್ಸ್ ಒಪ್ಪಿಕೊಂಡಿದೆ ಅಂತಿಮವಾಗಿ 100 ಕೋಟಿ ರೂ. ಪಾವತಿಸಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಟಗಾರನ ಮಾರಾಟ ಮಾಡುವ ಫ್ರಾಂಚೈಸಿಯು ಹೇಳುವ ಮೊತ್ತವನ್ನು ಖರೀದಿಸುವ ಫ್ರಾಂಚೈಸಿ ನೀಡಬೇಕಾಗುತ್ತದೆ. ಹೀಗೆ ಎರಡು ಫ್ರಾಂಚೈಸಿಗಳ ನಡುವೆ ಡೀಲ್ ಕುದುರಿದರೆ ಮಾತ್ರ ಟ್ರೇಡಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.ಆದರೆ ಐಪಿಎಲ್ ಟ್ರೇಡಿಂಗ್ ನಿಯಮಗಳ ಪ್ರಕಾರ, ಒಬ್ಬ ಆಟಗಾರನನ್ನು ಟ್ರೇಡ್ ಮಾಡಿಕೊಳ್ಳಬೇಕಿದ್ದರೆ ಎರಡೂ ಫ್ರಾಂಚೈಸಿಗಳು ಒಮ್ಮತಕ್ಕೆ ಬರಬೇಕು.

ಅದರಂತೆ ಹಾರ್ದಿಕ್ ಪಾಂಡ್ಯರ ಖರೀದಿಗೆ ಮುಂದಾಗಿದ್ದ ಮುಂಬೈ ಇಂಡಿಯನ್ಸ್​ಗೆ ಗುಜರಾತ್ ಟೈಟಾನ್ಸ್​ ಬೃಹತ್ ಮೊತ್ತದ ಬೇಡಿಕೆಯಿಟ್ಟರು. ಅಂತಿಮವಾಗಿ 100 ಕೋಟಿ ರೂ.ಗಳ ಡೀಲ್​ನೊಂದಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಂಡ್ಯರನ್ನು ಖರೀದಿಸಿದೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular