Sunday, December 14, 2025
Flats for sale
Homeಕ್ರೀಡೆಮುಂಬೈ : ಸ್ಮೃತಿ-ಪಲಾಶ್ ವಿವಾಹ ರದ್ದು, ಕೊನೆಗೂ ಸ್ಪಷ್ಟನೆ.

ಮುಂಬೈ : ಸ್ಮೃತಿ-ಪಲಾಶ್ ವಿವಾಹ ರದ್ದು, ಕೊನೆಗೂ ಸ್ಪಷ್ಟನೆ.

ಮುಂಬೈ : ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ತನ್ನ ಹಾಗೂ ಪಲಾಶ್ ಮುಚ್ಚಲ್ ನಡುವಿನ ವಿವಾಹ ರದ್ದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನವೆಂಬರ್ 23 ರಂದು ನಿಗದಿಯಾಗಿದ್ದ ವಿವಾಹಹಲವು ಕಾರಣಗಳಿಂದ ಸ್ಥಗಿತಗೊಂಡ ಬಳಿಕ ಸಾಕಷ್ಟು ಅನುಮಾನಗಳು, ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ಸ್ಮೃತಿ ಮಂಧಾನ ಪ್ರತಿಕ್ರಿಯಿಸಿದ್ದಾರೆ.

ವಿವಾಹಪೂರ್ವ ಸಮಾರಂಭಗಳು ನಡೆಯುತ್ತಿದ್ದರೂ, ಇಬ್ಬರೂ ತಮ್ಮ ವಿವಾಹವನ್ನು ಮುಂದೂಡಿದ ವಾರಗಳ ನಂತರ ಈ ಬಗ್ಗೆ ದೃಢೀಕರಣ ಬಂದಿದೆ. ಸದ್ಯ ತನ್ನ ವೈಯಕ್ತಿಕ ವಿಚಾರಗಳಿಗೆ ಗೌರವ ನೀಡಬೇಕೆಂದು ತಿಳಿಸಿರುವ ಸ್ಮೃತಿ, ಬದುಕಿನಲ್ಲಿ ಮುಂದುವರೆಯಲು ಹಾಗೂ ದೇಶಕ್ಕಾಗಿ ಹೆಚ್ಚಿನ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತಿರುವುದಾಗಿ ಸಾಮಾಜಿಕ ತಾಣವಾದ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಇದರಿAದ, ಡಿಸೆಂಬರ್ ೭ಕ್ಕೆ ವಿವಾಹ ಮುಂದೂಡಿಕೆಯಾಗಿದೆ ಎಂದು ಹಬ್ಬಿದ ವಿಚಾರ ಬರೀ ವದಂತಿಯಷ್ಟೇ ಎಂಬುದು ಸ್ಪಷ್ಟವಾಗಿದೆ. ಅತ್ತ ಮಾಜಿ ಪ್ರಿಯಕರ ಪಲಾಶ್ ಕೂಡ ತನ್ನ ಸಾಮಾಜಿಕತಾಣದಲ್ಲಿ ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ವಿವಾಹ ರದ್ದಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್‌ನಲ್ಲೇ ಮೊಟ್ಟ ಮೊದಲು ಇದಕ್ಕೂ ಮುನ್ನ ಸ್ಮೃತಿಯ ತಂದೆಯನ್ನು ಸಾಂಗ್ಲಿಯ ಆಸ್ಪತ್ರೆಗೆಕರೆದೊಯ್ಯಲಾಗಿದ್ದರಿಂದ ಅವರ ವಿವಾಹವನ್ನು ಮುಂದೂಡಲಾಗಿದೆ ಎAದು ವರದಿಗಳು ತಿಳಿಸಿದ್ದವು. ಆರಂಭದಲ್ಲಿ ಈ ಜೋಡಿ ನವೆಂಬರ್ 23 ರಂದು ವಿವಾಹವಾಗಲು ಸಿದ್ಧರಾಗಿದ್ದರು. ಮಂಧಾನ ಅವರ ತಂದೆ ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದ ನಂತರ, ಪಲಾಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿದ್ದವು. ಆದರೆ, ಕ್ರಿಕೆಟ್ ಜಗತ್ತಿನಲ್ಲಿ ವಿವಾಹ ಸಮಾರಂಭದ ದಿನವೇ ವಿವಾಹ ಮುರಿದು ಬಿದ್ದಿರುವ ಘಟನೆ ಇದೇ ಮೊದಲು.

ಮಂಧಾನ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಮೂಲಕ ಮುಚ್ಛಲ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥವನ್ನು ದೃಢಪಡಿಸಿದ್ದರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಸೇರಿದಂತೆ ಅವರ ಅನೇಕ ತಂಡದ ಸದಸ್ಯರು ಭಾಗವಹಿಸಿದ್ದರು. ಇತ್ತೀಚ್ಛಿಗಷ್ಟೇ ಬಿಡುಗಡೆಗೊಂಡ ಉತ್ಪನ್ನದ ವಿಡಿಯೋದಲ್ಲೂ ಸ್ಮೃತಿ ಉಂಗುರವನ್ನು ತೆಗೆದಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular