ಮುಂಬೈ : ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಹಾಯುತಿ ಮತ್ತು ಮಹಾವಿಕಾಸ ಅಘಾಡಿ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿದ್ದು ಎರಡೂ ಮೈತ್ರಿಕೂಟಗಳು ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯ ನಂತರ ಮಹಾಮೈತ್ರಿಕೂಟದ ಎರಡನೇ ಪ್ರಮುಖ ಮಿತ್ರ ಪಕ್ಷವಾದ ಶಿವಸೇನೆ (ಶಿಂಧೆ) ತಡರಾತ್ರಿ ತನ್ನ ೪೫ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯ ಪ್ರಕಾರ ಸ್ವತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊಪ್ರಿ ಪಚ್ಚಪಕ್ಕಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಶಿವಸೇನೆ ಶಿಂಧೆ ಗುಂಪಿನ ಮೊದಲ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ರತ್ನಗಿರಿಯಿಂದ ಉದಯ್ ಸಮಂತ್ ಮತ್ತು ರಾಜಾಪುರ ವಿಧಾನಸಭಾ ಕ್ಷೇತ್ರದಿಂದ ಕಿರಣ್ ಸಾಮಂತ್ ನಾಮನಿರ್ದೇಶನಗೊAಡಿದ್ದಾರೆ. ಕೊಂಕಣದಲ್ಲಿ ಸಾಮಂತ್ ಸಹೋದರರು ಜಾಕ್ ಪಾಟ್ ಹೊಡೆದಿದ್ದಾರೆ.
ರತ್ನಗಿರಿಯಿಂದ ಉದಯ್ ಸಮಂತ್ ಮತ್ತು ರಾಜಾಪುರ ವಿಧಾನಸಭಾ ಕ್ಷೇತ್ರದಿಂದ ಉದಯ್ ಸಮಂತ್ ಸಹೋದರ ಕಿರಣ್ ಸಾಮಂತ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಮಾಹಿಮ್ ವಿಧಾನಸಭಾ ಕ್ಷೇತ್ರದಿಂದ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ವಿರುದ್ಧ ಸದಾ ಸರವಂಕರ್ ಸ್ಪರ್ಧಿಸಲಿದ್ದಾರೆ.
ರಾಮದಾಸ್ ಕದಂ ಅವರ ಪುತ್ರ ಯೋಗೀಶ್ ಕದಂ ದಾಪೊಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದು ಜೋಗೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರವೀಂದ್ರ ವೈಕರ್ ಅವರ ಪತ್ನಿ ಮನಿಷಾ ವೈಕರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಲ್ಲಿ ಮುಂಬೈನ ಒಟ್ಟು ೩೬ ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ವಿಧಾನಸಭಾ ಕ್ಷೇತ್ರಗಳಿಗೆ ಶಿಂಧೆ ಗುಂಪಿನ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಮಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಅಮಿತ್ ಠಾಕ್ರೆಗೆ ಮಹಾಯುತಿ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂಬ ರಾಜ್ ಠಾಕ್ರೆ ಬೇಡಿಕೆಯ ಬಗ್ಗೆ ಒಂದು ಕಡೆ ಚರ್ಚೆಗಳು ನಡೆದಿವೆ. ಏಕನಾಥ್ ಶಿಂಧೆ ಪ್ರಕಟಿಸಿದ ಪಟ್ಟಿಯಲ್ಲಿ ಮಾಹಿಮ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸದಾ ಸರವಣಕರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಹಾಗಾಗಿ ಇದೀಗ ಅಮಿತ್ ಠಾಕ್ರೆ ವಿರುದ್ಧ ಮಹಾವಿಕಾಸ್ ಅಘಾಡಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೂ ಅಮಿತ್ಠಾ ಕ್ರೆ ಮತ್ತು ಸದಾ ಸರವಣಕರ್ ನಡುವಿನ ಹೋರಾಟ ಖಚಿತಗೊಂಡಿದೆ.
288 ಸ್ಥಾನಗಳ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಅ.29 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಹಿಂಪಡೆಯಲು ನ.೪ ಕೊನೆ ದಿನವಾಗಿದ್ದರೆ, ನ.೨೩ರಂದು ಫಲಿತಾಂಶ ಪ್ರಕಟವಾಗಲಿದೆ.