Friday, March 13, 2026
Flats for sale
Homeದೇಶಮುಂಬೈ : ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್ ನಲ್ಲಿ ದಿಡೀರ್ ಬೆಂಕಿ,ಜೀವ ಉಳಿಸಲು ಹೊರಗಿಳಿದವರಿಗೆ ಮತ್ತೊಂದು...

ಮುಂಬೈ : ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪುಷ್ಪಕ್ ಎಕ್ಸ್‌ಪ್ರೆಸ್ ನಲ್ಲಿ ದಿಡೀರ್ ಬೆಂಕಿ,ಜೀವ ಉಳಿಸಲು ಹೊರಗಿಳಿದವರಿಗೆ ಮತ್ತೊಂದು ರೈಲು ಡಿಕ್ಕಿ 8 ಕ್ಕೂ ಹೆಚ್ಚು ಮಂದಿ ಸಾವು..!

ಮುಂಬೈ : ಹೊಸದಿಲ್ಲಿ: ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ಚೈನ್‌ ಎಳೆದ ಬಳಿಕ ರೈಲು ನಿಂತ ಸಂದರ್ಭದಲ್ಲಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ರೈಲಿನಿಂದ ಹೊರಗಿಳಿದ ಸಂದರ್ಭದಲ್ಲಿ ಬೆಂಗಳೂರು-ಕರ್ನಾಟಕ ರೈಲಿನಡಿಯಲ್ಲಿ ಸಿಲುಕಿ ಕನಿಷ್ಠ10 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬೆಂಕಿಯ ಭಯದಿಂದ ಪ್ರಯಾಣಿಕರು ಚಲಿಸುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಜಿಗಿದಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಪ್ರಯಾಣಿಕರು ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪುಷ್ಪಕ್ ಎಕ್ಸ್‌ಪ್ರೆಸ್ ಲಕ್ನೋದಿಂದ ಮುಂಬೈಗೆ ಬರುತ್ತಿದ್ದಾಗ ಕೆಲವು ಪ್ರಯಾಣಿಕರು ಹಳಿಯಿಂದ ಇಳಿದಿದ್ದಾರೆ.ಜಲಗಾಂವ್ ಮತ್ತು ಪರಂದಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದ್ದು ಇನ್ನಷ್ಟು ಮಾಹಿತಿ ದೊರೆಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular