ಮುಂಬೈ ; ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಹುದ್ದೆಗೆ ಬಿಸಿಸಿಐ ಜಾಹೀರಾತು ಪ್ರಕಟಿಸಿದೆ. ಟೀಮ್ ಇಂಡಿಯಾಗೆ ಹೊಸದಾಗಿ ಕೋಚ್ ಆಗಿ ಬರುವವರ ಅವರ ಅವಧಿ ಮೂರು ವರೆ ವರ್ಷವಾಗಿರುತ್ತದೆ. ಜು.1, 2024 ರಿಂದ ಆರಂಭವಾಗಿ ಡಿ.31. 2027ಕ್ಕೆ ಅಂತ್ಯವಾಗುತ್ತದೆ. ಈಗಿನ ಕೋಚ್ ರಾಹುಲ್ ದ್ರಾವಿಡ್ ಮತ್ತೆ ಅರ್ಜಿ ಹಾಕುವುದಿಲ್ಲ ಎಂದು ತಿಳಿದು ಬಂದಿದೆ.
ನೂತನ ಕೋಚ್ ಹುದ್ದೆಗೆ ಬಿಸಿಸಿಐ ಮಾನದಂಡ ವಿಧಿಸಿದೆ. ನೂತನ ಕೋಚ್ ಆಗಿ ಅರ್ಜಿ ಸಲ್ಲಿಸುವವರು ೩೦ ಟೆಸ್ಟ್ ಅಥವಾ ೫೦ ಏಕದಿನ ಪಂದ್ಯಗಳನ್ನು ಆಡಿರಬೇಕು. ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇಲ್ಲದಿದ್ದರೂ ಹುದ್ದೆಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ. ಅರ್ಜಿದಾರರು ೩೦ ಟೆಸ್ಟ್ ಅಥವಾ ಅದಕ್ಕಿಂತ ಕಡಿಮೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರದಿದ್ದರೆ ಪೂರ್ಣ ಪ್ರಮಾಣದಲ್ಲಿ ಟೆಸ್ಟ್ ಆಡಿರುವ ತಂಡಕ್ಕೆ 2 ವರ್ಷವಾದರೂ ಕೋಚ್ ಆಗಿ ಕಾರ್ಯನಿರ್ವಹಿಸಿರಬೇಕು.
ಅರ್ಜಿದಾದರರು ಟೆಸ್ಟ್ ಆ ಡುವ ರಾಷ್ಟçಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸಿಲ್ಲವೆಂದರೆ ಅವರು ಐಪಿಎಲ್ ಅಥವಾ ಬೇರೆ ತಂಡ ಅಥವಾ ಪ್ರಥಮ ದರ್ಜೆ ಎ ತಂಡಗಳಲ್ಲಿ ಮೂರು ವರ್ಷ ಕಾರ್ಯನಿರ್ವಹಸಿದ ಅನುಭವ ಹೊಂದಿರಬೇಕು.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರು 60 ವರ್ಷದೊಳಗಿನವರಾಗಿರಬೇಕು. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಂತರ ಸಂದರ್ಶನ ನಡೆಸಿ ಬಿಸಿಸಿಐ ಅಂತಿಮಗೊಳಿಸಲಿದೆ.