ಮುಂಬೈ : ಭಾರತದ ಅತಿಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹೊಸ ಸೇತುವೆ ಸಮುದ್ರ ಮತ್ತು ಭೂಮಿ ಮೇಲೆ ನಿರ್ಮಾಣಗೊಂಡಿದೆ. 17,840 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ಅನ್ನು ಈಗ ‘ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ್ದಾರೆ..
ಅಟಲ್ ಸೇತು ಸುಮಾರು 21.8 ಕಿಮೀ ಉದ್ದದ ಆರು ಲೇನ್ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿಮೀ ಉದ್ದ ಮತ್ತು ಭೂಮಿಯಲ್ಲಿ ಸುಮಾರು 5.5 ಕಿಮೀ ಉದ್ದವಿದೆ. ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಸೇತುವೆಯ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ಡಿಸೆಂಬರ್ 2016 ರಲ್ಲಿ ಹಾಕಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಮುಂಬೈನಿAದ ರಾಯಗಢದವರೆಗೆ ನಿರ್ಮಿಸಿರುವ ಸಮುದ್ರಸೇತುವೆಯನ್ನು ಇದಾಗಿದ್ದು ಈ ಸೇತುವೆ ಮುಂಬೈ ವಿಮಾನನಿಲ್ದಾಣಕ್ಕೆ ವೇಗದ ಸಂಪರ್ಕ ಒದಗಿಸುವುದಲ್ಲದೆ, ದಕ್ಷಿಣ ಭಾರತದ ಪ್ರಯಾಣದ ಸಮಯವನ್ನೂ ಗಣನೀಯವಾಗಿ ತಗ್ಗಿಸಲಿದೆ.ಅಲ್ಲದೆ, ಮುಂಬೈ ಮತ್ತು ನಾಶಿಕ್‌ನಲ್ಲಿ ಪ್ರಧಾನಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.ಮಹಾರಾಷ್ಟç ಸಿಎಂ ಏಕನಾಥ ಶಿಂದೆ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


