ಮುಂಬೈ : ದೇಶದಲ್ಲಿ ಆನ್‌ಲೈನ್ ಕ್ರೆಡಿಟ್ ಕಾರ್ಡ್ ವಹಿವಾಟು ಮಾರ್ಚ್ ತಿಂಗಳಲ್ಲಿ ಬರೋಬ್ಬರಿ ಒಂದು ಲಕ್ಷ ಕೋಟಿ ರೂಪಾಯಿ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ 98,774 ಕೋಟಿ ರೂಪಾಯಿ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆದಿತ್ತು ಮಾರ್ಚ್ ತಿಂಗಳಲ್ಲಿ ಶೇಕಡಾ 20 ರಷ್ಟು ಹೆಚ್ಚಾಗುವ ಮೂಲಕ ಒಟ್ಟಾರೆ 1,04,081 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅಂಕಿ ಅಂಶಗಳು ತಿಳಿಸಿದೆ.
ಆಫ್‌ಲೈನ್ ವಹಿವಾಟುಗಳ ಪೈಕಿ ಪಾಯಿಂಟ್-ಆಫ್-ಸೇಲ್ ಮೆಷಿನ್‌ಗಳ ಮೂಲಕ ಮಾರ್ಚ್ ನಲ್ಲಿ ರೂ 60,378 ಕೋಟಿಗಳಷ್ಟಿತ್ತು, ಇದು ವರ್ಷದ ಹಿಂದೆ ರೂ 50,920 ಕೋಟಿಗಳಿಂದ ಶೇಕಡಾ 19 ರಷ್ಟು ಹೆಚ್ಚಾಗಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು ಕ್ರೆಡಿಟ್ ಕಾರ್ಡ್ ವೆಚ್ಚಗಳು 1,64,586 ಕೋಟಿ ರೂ.ಗಳಾಗಿದ್ದು, ಒಂದು ವರ್ಷದ ಹಿಂದೆ 1,37,310 ಕೋಟಿ ರೂ.ಗಳಿಂದ ಶೇಕಡಾ 20 ಹೆಚ್ಚಾಗಿದೆ. ಎಂದು ಅಂಕಿ ಅಂಶಗಳು ಮಾಹಿತಿ ನೀಡಿವೆ.
ಫೆಬ್ರವರಿಯಲ್ಲಿ ಮೊದಲ ಬಾರಿಗೆ 10ಕೋಟಿ ದಾಟಿದ ದೇಶದ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ ಮಾರ್ಚ್ನಲ್ಲಿ 10.2 ಕೋಟಿಗೆ ಹೆಚ್ಚಾಗಿದೆ. ಇದು ವರ್ಷದ ಹಿಂದೆ 8.5 ಕೋಟಿ ಕ್ರೆಡಿಟ್ ಕಾರ್ಡ್ ಇತ್ತು. ಈ ವರ್ಷ ಶೇಕಡಾ 20 ರಷ್ಟು ಹೆಚ್ಚಾಗಿದೆ. ಪಾಯಿಂಟ್ ಆಫ್ ಸೇಲ್ ವಹಿವಾಟುಗಳು ಮಾರ್ಚ್ನಲ್ಲಿ ಶೇಕಡಾ 28 ರಷ್ಟು ಹೆಚ್ಚಾಗಿದೆ.
ಯಾವ ಬ್ಯಾಂಕ್ ಎಷ್ಟು ಪಾಲು ಹಣಕಾಸಿನ ವರ್ಷದ ಅಂತ್ಯದಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡಾ 20.2 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ನಂತರ ಎಸ್‌ಬಿಐ ಶೇಕಡಾ 18.5 ಐಸಿಐಸಿಐ ಬ್ಯಾಂಕ್ ಶೇಕಡಾ 16.6 ಆಕ್ಸಿಸ್ ಬ್ಯಾಂಕ್, ಶೇಕಡಾ 14 ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 5.8ರಷ್ಟು ಪಾಲು ಹೊಂದಿವೆ ಎಂದು ತಿಳಿಸಿವೆ.
ಕಾರ್ಡ್ ವಿತರಿಸುವ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ಗಳ ವಹಿವಾಟಿನಲ್ಲಿ ಶೇಕಡಾ 90 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ಎಂದು ಮಾಹಿತಿಯಲ್ಲಿ ತಿಳಿಸಿವೆ.
ವರ್ಷದಿಂದ ವರ್ಷಕ್ಕೆ 18 ಕೋಟಿಗೆ ಏರಿದೆ, ಆದರೆ ಆನ್‌ಲೈನ್ ಪಾವತಿಗಳು ಶೇಕಡಾ 33 ರಷ್ಟು ಹೆಚ್ಚಾಗಿದ್ದು 16.4 ಕೋಟಿಗೆ ಏರಿದೆ.