Friday, November 22, 2024
Flats for sale
Homeದೇಶಮುಂಬೈ : ಗುತ್ತಿಗೆದಾರರು ನೀಡಿದ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ...

ಮುಂಬೈ : ಗುತ್ತಿಗೆದಾರರು ನೀಡಿದ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ ಐಎಎಸ್ ಅಧಿಕಾರಿ ಎತ್ತಂಗಡಿ.

ಮುಂಬೈ : ಕೆಲವರಿಗೆ ಅಧಿಕಾರ ಬಂದ ಕೂಡಲೇ ಒಮ್ಮೆಲೇ ಎಲ್ಲ ಲೂಟಿ ಹೊಡೆಯಲು ಹೋಗ್ತಾರೆ .ಆದರೆ ಇಲ್ಲಿ ಒಬ್ಬಳು ನಾಗರಿಕ ಸೇವಾ ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದ ಮೇಲೆ ಪ್ರೊಬೆಷನರಿ ಅಥವಾ ಟ್ರೈನಿ ಐಎಎಸ್ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ. ಸಾಮಾನ್ಯವಾಗಿ ತರಬೇತಿಯಲ್ಲಿರುವ ಅಧಿಕಾರಿಗಳಿಗೆ ಕೆಂಪು ಅಥವಾ ನೀಲಿ ಬಣ್ಣದ ಗೂಟದ ಕಾರುಗಳನ್ನು ನೀಡಲಾಗುವುದಿಲ್ಲ ಕೆಂಪು ನೀಲಿ ಬೀಕಾನ್‌ಗಳಿರುವ ಗಾಡಿಗಳನ್ನು ಅವರು ಬಳಸುವಂತಿಲ್ಲ, ಆದರೆ ಈ ಐಎಎಸ್ ಅಧಿಕಾರಿ ತರಬೇತಿಯಲ್ಲಿರುವಾಗಲೇ ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು ಬೀಕಾನ್ ದೀಪವನ್ನು ಅಳವಡಿಸಿಕೊಂಡು ತಿರುಗಾಡುತ್ತಿದ್ದರು. ಇದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಪೂಜಾ ಖೇಡ್ಕರ್ ಎಂಬುವವರೇ ಹೀಗೆ ತಮ್ಮ ಅಧಿಕಾರ ಬಳಸಿಕೊಂಡು ಗೂಟದ ಕಾರಲ್ಲಿ ತಿರುಗಾಡುತ್ತಿದ್ದ ಐಎಎಸ್ ಅಧಿಕಾರಿ.ಈಕೆಯ ಕಿತಾಪತಿ ಬರೀ ಇಷ್ಟೇ ಅಲ್ಲ ಹೆಚ್ಚುವರಿ ಕಲೆಕ್ಟರ್ ಅಜಯ್ ಮೋರ್ ಅವರು ಇಲ್ಲದಿದ್ದಾಗ ಅವರಿಗೆ ಮೀಸಲಾಗಿದ್ದ ಕೊಠಡಿಯನ್ನು ಕೂಡ ಇವರು ಅಕ್ರಮಿಸಿಕೊಂಡಿದ್ದರು. ಅವರ ಅನುಮತಿ ಇಲ್ಲದೇ ಅವರ ಕಚೇರಿಯ ಪೀಠೋಪಕರಣಗಳನ್ನು ಕಚೇರಿಯಿಂದ ತೆಗೆದು ಹಾಕಿದ್ದರು. ಅಲ್ಲದೇ ತನಗೆ ಲೆಟರ್ ಹೆಡ್, ನಾಮಫಲಕ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಕಂದಾಯ ಸಹಾಯಕರಿಗೆ ಕೇಳಿದ್ದರು ಎಂದು ವರದಿ ಆಗಿದೆ.

ಕೇಂದ್ರ ನಾಗರಿಕ ಸೇವಾ ಆಯೋಗವೂ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ 821ನೇ ರಾಂಕ್ ಗಳಿಸಿದ್ದು, ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಈಗ ಅವರನ್ನು ಮಹಾರಾಷ್ಟ್ರದ ಮತ್ತೊಂದು ಜಿಲ್ಲೆಯಾದ ವಾಶಿಂಗೆ ವರ್ಗಾವಣೆ ಮಾಡಲಾಗಿದೆ. ಇವರು ಕೇವಲ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಿದ್ದು ಮಾತ್ರವಲ್ಲದೇ, ಕಾರಿಗೆ ಮಹಾರಾಷ್ಟ್ರ ಸರ್ಕಾರ ಎಂಬ ಬೋರ್ಡನ್ನು ಕೂಡ ಅಂಟಿಸಿದ್ದರು. ಪ್ರೊಬೇಷನರಿ ಅವಧಿಯಲ್ಲಿ ಯಾವ ಅಧಿಕಾರಿಗೂ ಈ ಸೌಲಭ್ಯ ನೀಡುವುದಿಲ್ಲ, ಹೀಗಾಗಿ ಇದು ವಿವಾದಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular