ಮುಂಬೈ : ವಿಶ್ವದ ಅತ್ಯಂತ ಜನಪ್ರಿಯ ಟಿ-೨೦ ಪಂದ್ಯಾವಳಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಅವೃತ್ತಿಯ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದ್ದು, ಈ ಮೆಗಾ ಹರಾಜಿಗೆ ನೊಂದಾಯಿಸಿಕೊAಡಿರುವ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದೆ.
ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ 2025 ಕೂಟಕ್ಕಾಗಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ 22 ರಿಂದ 26 ರ ವರೆಗೆ ಪರ್ತ್ನಲ್ಲಿ ನಡೆಯಲಿದೆ.
ಐಪಿಎಲ್ 2025 ಆವೃತ್ತಿ ಹಿನ್ನೆಲೆಯಲ್ಲಿ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿದೆ ಈಕುರಿತು ಐಪಿಎಲ್‌ನ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಮೆಗಾ ಹರಾಜಿನಲ್ಲಿ ದೇಶ ವಿದೇಶಗಳ ಸ್ಟಾರ್ ಆಟಗಾರರ ಅದೃಷ್ಟ ಬದಲಾಗಲಿದ್ದರೆ, ಯುವ ಹಾಗೂ ಪ್ರತಿಭಾವಂತ ಆಟಗಾರರ ಅದೃಷ್ಟ ಖುಲಾಯಿಸಲಿದೆ. ಐಪಿಎಲ್ 2025 ರ ಆವೃತ್ತಿಗಾಗಿ ನಡೆಯಲಿರುವ ಆಟಗಾರರ ಹರಾಜಿಗಾಗಿ ಒಟ್ಟು 574 ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ಇವರಲ್ಲಿ 366 ಭಾರತೀಯ ಆಟಗಾರರು ಹಾಗೂ 208 ವಿದೇಶಿ ಆಟಗಾರರಿದ್ದಾರೆ. ಭಾರತದ 318 ಅಲ್ ಕ್ಯಾಪ್ಡ್ ಹಾಗೂ 12 ವಿದೇಶಿ ಆಟಗಾರರು ಕೂಡ ಐಪಿಎಲ್ ಮೆಗಾ ಹರಾಜಿನಲ್ಲಿ ನಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.
ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಒಟ್ಟು574ಆಟಗಾರರ ಪೈಕಿ ೨೦೪ ಆಟಗಾರರಿಗೆ ಮಾತ್ರ ಆಡುವ ಅವಕಾಶ ಲಭಿಸಲಿದೆ. ಈ ಪೈಕಿ ೭೦ ಸ್ಥಾನಗಳು ವಿದೇಶಿ ಆಟಗಾರರಿಗೆ ಲಭ್ಯವಾಗಲಿವೆ.
ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಗರಿಷ್ಠ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಈ ಮೂಲ ಬೆಲೆಯೊಂದಿಗೆ 81 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಖ್ಯಾತ ಆಟಗಾರರಾದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಇಶಾನ್ ಕಿಶನ್ ಮೊಹಮ್ಮದ್ ಶಮಿ ಯಜುವೇಂದ್ರ ಚಹಾಲ್ ಸೇರಿದಂತೆ ಕೆಲವರು ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ.
ಟೀಮ್ ಇಂಡಿಯಾದ ಈ ಪ್ರಮುಖ ಆಟಗಾರರನ್ನು ಖರೀಧಿಸಲು ಐಪಿಎಲ್ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದು ಹಣದ ಹೊಳೆಯೇ ಹರಿಯುವ ನಿರೀಕ್ಷೆಯಿದೆ. ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಆ ತಂಡ ಬಿಡುಗಡೆ ಮಾಡಿದ್ದು, ಅವರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣ್ಣಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಿAದ ಬಿಡುಗಡೆಯಾಗಿರುವ ರಿಷಬ್ ಪಂತ್ ಅವರನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಆರ್‌ಸಿಬಿ ಫ್ರಾಂಚೈಸಿ ಮಾಲೀಕರು ಆಸಕ್ತಿ ತೋರಿದ್ದಾರೆಂದು ಹೇಳಲಾಗಿದೆ.