ಮುಂಬೈ : 2023-24ನೇ ಸಾಲಿನ ಬಿಸಿಸಿಐ ಆಯವ್ಯಯ ಬಹಿರಂಗಗೊAಡಿದ್ದು, ಸ್ವತಃ ಬಿಸಿಸಿಐ ಬಿಡುಗಡೆಗೊಳಿಸಿರುವ ವರದಿಯಂತೆಯೇ ಈ ಸಾಲಿನಲ್ಲಿ ಬಿಸಿಸಿಐ ಬರೋಬ್ಬರಿ 9741 ಕೋಟಿ ಆದಾಯ ಮಾಡಿದೆ. ಅಚ್ಚರಿ ಎಂದರೆ, ಇದರ ಪೈಕಿ 5 ಸಾವಿರ ಕೋಟಿ ಐಪಿಎಲ್‌ನಿಂದಲೇ ಬಂದಿದೆ ಎನ್ನಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮAಡಳಿ (ಬಿಸಿಸಿಐ) 2023-24ರಲ್ಲಿ ತನ್ನ ಅತ್ಯಧಿಕ ಗಳಿಕೆಯನ್ನು ದಾಖಲಿಸಿದ್ದು, ತನ್ನ ಆದಾಯವನ್ನು ಈ ಬಾರಿಯೂ ಹೆಚ್ಚಿಸಿಕೊಂಡಿದೆ. ಬಿಸಿಸಿಐನ ಆದಾಯದ ಶೇ.5೦ರಷ್ಟು ಆದಾಯ ಐಪಿಎಲ್‌ನಿಂದಲೇ ಬAದಿರುವುದು ವಿಶೇಷ.
2023-24 ರಲ್ಲಿ ಮಾತ್ರ 5761 ಕೋಟಿ ರೂ. ಗಳಿಸಿತು. ಮಂಡಳಿಯು Iಅಅ ಯ ಪಾಲಿನಿಂದ 1042 ಕೋಟಿ ರೂ.ಗಳನ್ನು ಮತ್ತು ಮೀಸಲು ಮತ್ತು ಹೂಡಿಕೆಗಳಿಂದ 987 ಕೋಟಿ ರೂ.ಗಳನ್ನು ಗಳಿಸಿತು. ಮಹಿಳಾ ಪ್ರೀಮಿಯರ್ ಲೀಗ್ ನಿಂದ 378 ಕೋಟಿ ರೂ.ಗಳನ್ನು ಗಳಿಸಲಾಯಿತು ಮತ್ತು IPL ಅಲ್ಲದ ಮಾಧ್ಯಮ ಹಕ್ಕುಗಳು ಮತ್ತು ಟಿಕೆಟ್ ಮಾರಾಟ ಮತ್ತು ವಾಣಿಜ್ಯ ಹಕ್ಕುಗಳಿಂದ ತಲಾ 361 ಕೋಟಿ ರೂ.ಗಳನ್ನು ಗಳಿಸಲಾಯಿತು.
2022-23 ರಲ್ಲಿ, ಐಪಿಎಲ್ 6820 ಕೋಟಿ ರೂ.ಗಳನ್ನು ಗಳಿಸಿದ್ದು, ಇದಕ್ಕೂ ಮೊದಲು, 2021-22 ರಲ್ಲಿ, ಮಂಡಳಿಯು ವಾರ್ಷಿಕ 4230 ಕೋಟಿ ರೂ.ಗಳ ಗಳಿಕೆ ಮಾಡಿತ್ತು. 2023-24ರ ಗಳಿಕೆಯು ಬಿಸಿಸಿಐ ತನ್ನ ಗಳಿಕೆಗೆ 5೦೦೦ ಕೋಟಿ ರೂ.ಗಳಿಗೂ ಹೆಚ್ಚು ಸೇರಿಸಿದೆ ಎಂದು ವರದಿ ತಿಳಿಸಿದೆ.
ಹವಾಸ್ ಪ್ಲೇ ವರದಿಯು ಒಂದು ದಿನದ ಹಿಂದಷ್ಟೇ ಭಾರತೀಯ ಕ್ರೀಡಾ ಲೀಗ್‌ಗಳ ಪೈಕಿ ಐಪಿಎಲ್ ಜನಪ್ರಿಯ ಎಂದು ವರದಿ ಮಾಡಿತ್ತು. ಡಬ್ಲ್ಯೂಪಿಎಲ್ ಸಹ ಈಗ ಭಾರತೀಯ ವೀಕ್ಷಕರ ಸಂಖ್ಯೆಯಲ್ಲಿ ಯುರೋಪಿಯನ್ ಫುಟ್‌ಬಾಲ್ ದೈತ್ಯರನ್ನು ಮೀರಿಸಿದೆ ಎಂದು ತಿಳಿಸಿತ್ತು. ಇದಾದ ಮರುದಿನವೇ ಈಗ ಬಿಸಿಸಿಐನ ಆದಾಯದ ಬಗ್ಗೆಯೂ ಮಾಹಿತಿ ಹೊರಬಂದಿದೆ.
ವರದಿಯ ಪ್ರಕಾರ, ಐಪಿಎಲ್ 2024 ರಲ್ಲಿ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ಗಳಲ್ಲಿ 857 ಮಿಲಿಯನ್ ವೀಕ್ಷಕರನ್ನು ದಾಖಲಿಸಿದೆ, 464 ಮಿಲಿಯನ್ ದೂರದರ್ಶನದ ಮೂಲಕ ವೀಕ್ಷಿಸಿದರು ಮತ್ತು 393 ಮಿಲಿಯನ್ ಒಟಿಟಿ ಪ್ಲಾಟ್‌ಫಾರ್ಮ್ಗಳಲ್ಲಿ ವೀಕ್ಷಿಸಿದರು. ಐಪಿಎಲ್ 2025 ಒಟ್ಟು ವೀಕ್ಷಣಾ ಸಮಯದ 840 ಬಿಲಿಯನ್ ನಿಮಿಷಗಳನ್ನು ತಲುಪಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಒAದು ವಾರದ ಅಮಾನತುಗೊಳಿಸುವಿಕೆಯ ಹೊರತಾಗಿಯೂ, ಲೀಗ್ ತನ್ನ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲಎಂದು ತಿಳಿದಿದೆ.