ಮುಂಬೈ : ದೇಶದ ಅರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಮುಖ ಸಾಲದ ರೆಪೋ ದರವನ್ನು ಶೇ ೦.೨೫ರಷ್ಟು ಮೂಲಾಂಶ ಪಾಯಿಂಟ್ ಕಡಿತಗೊಳಿದೆ.
ರ‍್ಬಿಐ ಹಣಕಾಸು ನೀತಿ ಸಮಿತಿ ನಿರ್ಧಾರದ ಪರಿಣಾಮವಾಗಿ ರೆಪೊ ದರ ಶೇ.6.5 ರಿಂದ ಶೇ 6.25 ಕ್ಕೆ ಇಳಿಕೆಯಾಗಿದೆ. 2020 ರ ನಂತರದಲ್ಲಿ ಇದೇ ಮೊದಲ ಬಾರಿಗೆ RBI ರೆಪೊ ದರದಲ್ಲಿ ಇಳಿಕೆ ಮಾಡಿದೆ. ಹಣಕಾಸು ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿದ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಚಿಲ್ಲರೆ ಹಣದುಬ್ಬರ ಮಟ್ಟ ಶೇ 6 ರೊಳಗೆ ಇದೆ. ಹೀಗಾಗಿ ರ‍್ಬಿಐ ದರ ಕಡಿತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದೇ ಅಂದಾಜಿಸಲಾಗಿತ್ತು. 2023ರ ಫೆಬ್ರವರಿಯಿಂದ ರೆಪೊ ದರ ೬.೫ರಿಂದ ಇದೀಗ ೬.೨೫ಕ್ಕೆ ಇಳಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಹಣದುಬ್ಬರ ಗುರಿ ಚೌಕಟ್ಟು ಭಾರತೀಯ ಆರ್ಥಿಕತೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಸುಮಾರು ಐದು ವರ್ಷಗಳಲ್ಲಿ ಮೊದಲ ದರ ಕಡಿತ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊAಡಿದ್ದಾರೆ.
ಅಲ್ಲದೆ, ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ ದರ ಶೇಕಡಾ 6 ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ಸೌ ಲಭ್ಯ ದರವು ಶೇಕಡಾ 6.50 ಆಗಿದೆ.ಸರ್ಕಾರ ಪ್ರಸಕ್ತ ಹಣಕಾಸು ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಹಣಕಾಸಿನ ಕೊರತೆಯ ಮುನ್ಸೂಚನೆಗಳನ್ನು ಸುಧಾರಿಸಿದೆ ಎಂದು ಹೇಳಿದ್ದಾರೆ.
2025 ರಲ್ಲಿ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇಕಡಾ 4.8 ಕ್ಕೆ ನಿಗದಿಪಡಿಸಲಾಗಿದೆ, ಬಜೆಟ್‌ನಲ್ಲಿ ಶೇಕಡಾ 4.9 ಕ್ಕಿಂತ ಕಡಿಮೆಯಾಗಿದೆ, ಆದರೆ2026ರ ಹಣಕಾಸು ವರ್ಷದಲ್ಲಿ ಶೇಕಡಾ 4.4 ಕ್ಕೆ ಅಂದಾಜಿಸಲಾಗಿದೆ, ಇದು ಕ್ರೋಢೀಕರಣ ಮಾರ್ಗಸೂಚಿಯಲ್ಲಿ ನೀಡಲಾದ ಪ್ರಮಾಣಕ್ಕಿಂತ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಹಾರದ ಮೇಲಿನ ಅನುಕೂಲಕರ ದೃಷ್ಟಿಕೋನದಿಂದ ಹಣದುಬ್ಬರ ಕಡಿಮೆಯಾಗಿದೆ ಮತ್ತು 2026 ರಲ್ಲಿ ಮತ್ತಷ್ಟು ಕಡಿಮೆಯಾಗಲಿದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸುವ ನಿರೀಕ್ಷೆಯಿದೆ,ಕೃಷಿ ಚಟುವಟಿಕೆಗಳು ಉತ್ತಮವಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಉತ್ಪಾದನಾ ಚಟುವಟಿಕೆ ಕ್ರಮೇಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಡಿಜಿಟಲ್ ವಂಚನೆಯ ಹೆಚ್ಚಳದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ ಅವರು ಎಲ್ಲಾ ಪಾಲುದಾರರಿಂದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ರೀತಿಯ ವಂಚನೆಯಿAದ ಪಾರಾಗಬಹುದು ಎಂದು ತಿಳಿಸಿದ್ದಾರೆ. “ಬ್ಯಾಂಕಿAಗ್ ಮತ್ತು ಪಾವತಿ ವ್ಯವಸ್ಥೆಗಳಲ್ಲಿ ಡಿಜಿಟಲ್ ಭದ್ರತೆ ಹೆಚ್ಚಿಸಲು ರ‍್ಬಿಐ ವಿವಿಧ ಕ್ರಮ ತೆಗೆದುಕೊಳ್ಳುತ್ತಿದೆ. ಅಂತರರಾಷ್ಟಿçÃಯ ಡಿಜಿಟಲ್ ಪಾವತಿಗಳಿಗೆ ಹೆಚ್ಚುವರಿ ದೃಢೀಕರಣ ಅಂಶ ಆಫ್‌ಶೋರ್ ವ್ಯಾಪಾರಿಗಳಿಗೆ ವಿಸ್ತರಿಸಲು. ಸೈಬರ್ ಅಪಾಯ ತಗ್ಗಿಸಲು ತಡೆಗಟ್ಟುವಿಕೆ ಹಲವು ಕ್ರಮಕೈಗೊಳ್ಳಲು ನಿರ್ದರಿಸಲಾಗಿದೆ ಎಂದಿದ್ದಾರೆ.