ಮುಂಬೈ : ದೇಶದ ಅಗ್ರಮಾನ್ಯ ಉದ್ಯಮಿ, ಕೊಡುಗೈದಾನಿ ದಿವಂಗತ ರತನ್ ಟಾಟಾ ಅವರ ಜೀವನ ಆಧರಿಸಿದ ಚಿತ್ರ ನಿರ್ಮಾಣ ಮಾಡುವ ಮೂಲಕ ಗೌರವ ನಮನ ಸಲ್ಲಿಸಲು ನಿರ್ಧರಿಸಲಾಗಿದೆ. ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಿಗೆ ಗೌರವ ಸಲ್ಲಿಸಲು ಜೀ-ಮೀಡಿಯಾ ಮುಂದಾಗಿದ್ದು ಇಬ್ಬರು ನಟರನ್ನು ಆಯ್ಕೆ ಮಾಡಿಕೊಂಡಿದ್ದು, ಅವರು ತೆರೆಯ ಮೇಲೆ ಯುವಕ ಮತ್ತು ಹಿರಿಯ ರತನ್ ಟಾಟಾ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ದಿವಂಗತ ಉದ್ಯಮಿ ರತನ್ ಟಾಟಾ ಅವರು ಇದೇ ತಿಂಗಳ ೯ ರಂದು ನಿಧನರಾಗಿದ್ದರು.ಹೀಗಾಗಿ ಅವರ ಕೆಲ ಕಾರ್ಯಗಳನ್ನು ಸಿನಿಮಾ ಮೂಲಕ ತೆರೆಯ ಮೇಲೆ ಕಟ್ಟಿಕೊಡಲು ಉದ್ದೇಶಿಸಲಾಗಿದೆ. ಈ ನಡುವೆ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್ನ ಹೊಸ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇದಲ್ಲದೆ, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಿಗೆ ಗೌರವ ಸಲ್ಲಿಸಲು, ಝೀ ಮೀಡಿಯಾ ಅವರ ಜೀವನಚರಿತ್ರೆ
ಘೋಷಿಸಿದ್ದು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ರತನ್ ಟಾಟಾ ಅವರ ಜೀವನಚರಿತ್ರೆಯಲ್ಲಿ ರತನ್ ಟಾಟಾ ಅವರ ಪಾತ್ರ ಯಾರು ನಿರ್ವಹಿಸುತ್ತಾರೆ ಅಥವಾ ಚಿತ್ರದ ತಾರಾ ಬಳಗದಲ್ಲಿ ಯಾರನ್ನು ಸೇರಿಸಲಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ .ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ರತನ್ ಟಾಟಾಪಾತ್ರವನ್ನು ನಿರ್ವಹಿಸಲು ನಟರ ಹೆಸರನ್ನು ಸೂಚಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಪದ್ಮಾವತ್ ನಟ ಜಿಮ್ ಸರ್ಭ್ನಿಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ನಾಸಿರುದ್ದೀನ್ ಶಾ ಮತ್ತಿತರ ಹೆಸರುಗಳಿವೆ.
ರತನ್ ಟಾಟಾ ಪಾತ್ರ ಮಾಡಲು ನಾಸಿರುದ್ದೀನ್ ಶಾ ಅಥವಾ ಬೊಮನ್ ಇರಾನಿ’ ಸೂಕ್ತ ಎಂದು ಸಾಮಾಜಿಕ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ. ಪದ್ಮವಿಭೂಷಣ ರತನ್ ಟಾಟಾ ಅವರು ಅನೇಕ ತಲೆಮಾರುಗಳ ಭಾರತೀಯರಿಗೆ ನಾಯಕತ್ವ, ದೂರದೃಷ್ಟಿ, ಸಹಾನುಭೂತಿ ಮತ್ತು ಕೆಲಸದ ನೀತಿಯ ಪುರಾವೆಯಾಗಿದೆ.
ಕೋಟ್ಯಂತರ ಭಾರತೀಯರ ಉನ್ನತಿಗೆ ಕಾರಣವಾದ ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ ಕಾರ್ಪೊರೇಟ್ ಜಗತ್ತಿನ ನಾಯಕನಿಗೆ ನಮನ ಸಲ್ಲಿಸಲು ಅವರ ಜೀವನ ಚರಿತ್ರೆಯ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು ಸದ್ಯದಲ್ಲಿಯೇ ತಾರಾಬಳಗ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.