ಮುಂಡಗೋಡ: ಅಂತರ ಜಿಲ್ಲಾ ಕಳ್ಳಿಯರನ್ನು ಇಲ್ಲಿನ ಪೊಲೀಸರು ಬಂಧಿಸಿ ಆರೋಪಿತರಿಂದ 6 ಲಕ್ಷ ರೂ ಬೆಲೆಬಾಳುವ 100 ಗ್ರಾಂ ಬಂಗಾರವನ್ನು ಜಪ್ತಿಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತನಗರದ ಶಾಂತಿ ವೆಂಕಟರಮಣ ಕಲ್ಲವಡ್ಡರ (31)ಮತ್ತು ಮೀನಾಕ್ಷಿ ಪರಮೇಶ ಕಲ್ಲವಡ್ಡರ ಬಂಧಿತ ಆರೋಪಿಗಳಾಗಿದ್ದಾರೆ. 2022 ಮೇ 16 ರಂದು ತಾಲೂಕಿನ ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಅರಳಿಕಟ್ಟಿ ಎಂಬ ಯುವತಿ ಎಸ್ ಬಿ ಐ ಬ್ಯಾಂಕಿನಿಂದ 49,000 ರೂ ಡ್ರಾ ಮಾಡಿ ತನ್ನ ವ್ಯಾನಿಂಟ್ ಬ್ಯಾಂಗಿನಲ್ಲಿ ಹಾಕಿಕೊಂಡು ಪಟ್ಟಣದ ನ್ಯಾಯಾಲಯದ ಹತ್ತಿರ ಇರುವ ಝರಾಕ್ಸ ಅಂಗಡಿಯಲ್ಲಿ ಹಣ ನೋಡಿದಾಗ ಹಣ ಇರಲಿಲ್ಲ. ಯಾರೋ ಕಳ್ಳರು ಹಿಂದಿನಿಂದ ಬ್ಯಾಗನಲ್ಲಿದ್ದ ಪಸ್೯ನ್ನು ಕಳ್ಳತನ ಮಾಡಿಕೊಂಡ ಹೊಗಿದ್ದರ ಬಗ್ಗೆ ಇಲ್ಲಿನ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದ ಪೋಲಿಸರು ಜನವರಿ 24 ರಂದು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 20 ಸಾವಿರ ರೂ ಜಪ್ತಿಮಾಡಲಾಗಿದೆ. ಇದಲ್ಲದೆ ಕಳೆದ ಎರಡು ತಿಂಗಳ ಹಿಂದೆ ಶಿರಶಿಯ ಹಳೆ ಬಸನಿಲ್ದಾಣ ಹಾಗೂ ನಿಲೇಕಣಿ ಬಸನಿಲ್ದಾಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 6 ಲಕ್ಷ ರೂ ಬೆಲೆಬಾಳುವ 100 ಗ್ರಾಮ ಬಂಗಾರವನ್ನು ಆರೋಪಿಗಳಿಂದ ಜಪ್ತಿಮಾಡಲಾಗಿದೆ.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಜಗದೀಶ ನಾಯ್ಕ, ಡಿವೈಎಸ್ಪಿ ಗಣೇಶ ಕೆ ಎಲ್ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್. ಲೋಕಾಪುರ ನೇತೃತ್ವದಲ್ಲಿ ಪಿಎಸ್ಐಗಳಾದ ಪರಶುರಾಮ ಎಮ್ ಮತ್ತು ಹನಮಂತ ಕುಡಗುಂಚಿ, ಸಿಬ್ಬಂದಿಗಳಾದ ಗಂಗಾಧರ ಹೊಂಗಲ, ಗೀತಾ ಕಲಘಟಗಿ, ಗಣಪತಿ ಹೊನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬಡಗೇರ, ಮಹಾಂತೇಶ ಮುಧೋಳ, ತಿರುಪತಿ, ಜ್ಯೋತಿ ಬನವಾಸಿ, ಪುಷ್ಪಾ , ಶಾಲಿನಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಧಿಕಾರ ಸಿಬ್ಬಂದಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.


