Monday, October 20, 2025
Flats for sale
Homeರಾಶಿ ಭವಿಷ್ಯಮಾರ್ಚ್ 23 ರಿಂದ 29 ರ ವರೆಗಿನ ವಾರ ಭವಿಷ್ಯ..!

ಮಾರ್ಚ್ 23 ರಿಂದ 29 ರ ವರೆಗಿನ ವಾರ ಭವಿಷ್ಯ..!

ಮೇಷ ರಾಶಿ
ಈಗ ಗುರು ವಕ್ರಿಯಾಗಿ ಬಹಳ ಸಮಸ್ಯೆಗಳನ್ನು ಅನುಭವಿಸಿದ್ದೀರಿ. ಈಗ 4.2.25 ರಂದು ಗುರು ವಕ್ರತ್ಯಾಗ ಮಾಡಿ ಋಜುಮಾರ್ಗದಲ್ಲಿ ಚಲಿಸುತ್ತಾನೆ. ಆಗ ನಿಮಗೆ ಎರಡನೇ ಮನೆಯ ಗುರುವಿನ ಪೂರ್ಣ ಅನುಗ್ರಹ ಸಿಗುತ್ತದೆ. ನಿಮ್ಮದೇನೇ ಪೆಂಡಿAಗ್ ಕೆಲಸಗಳಿದ್ದರೂ ಈಗ ನೆರವೇರುತ್ತದೆ. ಮೂರನೇ ಮನೆಯಲ್ಲಿ ಕುಜ ಆರನೇ ಮನೆಯಲ್ಲಿ ಕೇತು ಸಹಾ ನಿಮಗೆ ಬೆಂಬಲ ನೀಡುತ್ತಾರೆ.

ವೃಷಭ ರಾಶಿ
ಗುರು ಈ ವಾರದಲ್ಲಿ ವಕ್ರತ್ಯಾಗ ಮಾಡುತ್ತಾನೆ ನಂತರ ನಿಮಗೆ ಶುಭಫಲಗಳು ಸಿಗುತ್ತವೆ. ಗುರು ಐದನೇ, ಏಳನೇ ಒಂಬತ್ತನೇ ಮನೆಗೆ ದೃಷ್ಟಿಹಾಯಿಸುವುದರಿಂದ ಈಗ ನಿಮಗೆ ಸಮೃದ್ಧಿಯ ಕಾಲ. ಹಣದ ಹರಿವುಉತ್ತಮವಾಗಿದೆ. ರಾಹು ಲಾಭಸ್ಥಾನದಲ್ಲಿ ಇರುವುದರಿಂದ ಶಕ್ತಿ ಸಾಹಸಗಳೂ ಇರುತ್ತದೆ. ಶುಕ್ರ ಲಾಭಸ್ಥಾನದಲ್ಲಿ ಇರುವುದು ಹಣಲಾಭ, ಸುವರ್ಣಲಾಭ ಮೊದಲಾದ ಶುಭಸಂಗತಿಗಳು ಜರುಗುತ್ತದೆ.

ಮಿಥುನ ರಾಶಿ
ಹತ್ತರಲ್ಲಿ ಶುಕ್ರ ರಾಹು, ಒಂಬತ್ತರಲ್ಲಿ ಶನಿ, ಎಂಟರಲ್ಲಿ ಸೂರ್ಯ ಬುಧ ಸಮಯ ಮಧ್ಯಮವಾಗಿದೆ. ಯಾವುದೇ ಗ್ರಹದ ಕ್ರೂರದೃಷ್ಟಿಯೂ ಇಲ್ಲಅನುಗ್ರಹವೂ ಇಲ್ಲ. ಇರುವ ಕೆಲಸ ಮಾಡಿಕೊಂಡು ಹೋಗಿ. ಬದಲಾವಣೆಗೆ ಇದು ಸಕಾಲವಲ್ಲ. ಒಳ್ಳೆಯ ದಿನಗಳಿಗಾಗಿಇನ್ನೂ ಕಾಯಬೇಕು. ಸ್ವಲ್ಪ ಖರ್ಚುಗಳೂ, ಒತ್ತಡಗಳೂ ಇರುತ್ತದೆ.

ಕಟಕ ರಾಶಿ
ಲಾಭದಲ್ಲಿ ಗುರು ಈ ವಾರ ವಕ್ರತ್ಯಾಗ ಮಾಡಿ ಶುದ್ಧನಾಗುತ್ತಾನೆ. ನಂತರ ನಿಮಗೆ ಅನೇಕ ಒಳ್ಳೆಯ ಸಂಗತಿಗಳು ಗಮನಕ್ಕೆ ಬರುತ್ತದೆ. ಒಂಬತ್ತರಲ್ಲಿ ಶುಕ್ರ ಸಹ ಶುಭಫಲಗಳನ್ನು ಕೊಡುತ್ತಾನೆ. ಸಧ್ಯದಲ್ಲೇ ಅಷ್ಠಮ ಶನಿಯಿಂದ ಬಿಡುಗಡೆ ಹೊಂದುತ್ತೀರಿ. ನಂತರ ನಿಮ್ಮ ಕೆಲಸಗಳಿಗೆಲ್ಲ ದೇವರ ಅನುಗ್ರಹ ದೊರೆತು ಎಲ್ಲ ಹಾದಿಯೂ ಸುಲಲಿತವಾಗುತ್ತದೆ.

ಸಿಂಹ ರಾಶಿ
ಪ್ರತಿಯೊಂದು ರೂ ಖರ್ಚುಮಾಡುವಾಗ ಇದು ಅವಶ್ಯಕತೆ ಇದೆಯೇ ಇಲ್ಲವೇ ಯೋಚಿಸಿ ಖರ್ಚುಮಾಡಿ. ದರ್ಪದ ನಡವಳಿಕೆ ಬೇಡ. ದರ್ಪದ ನಡವಳಿಕೆಯಿಂದ ನಿಮ್ಮ ಶತ್ರುಗಳು ಹೆಚ್ಚಾಗುತ್ತಾರೆ. ವೃತ್ತಿಯಲ್ಲಿ ಒತ್ತಡಗಳು ಇರುತ್ತವೆ. ಮೇಲಧಿಕಾರಿಗಳ ಕಿರುಕುಳ ಇರುತ್ತದೆ. ಪ್ರತಿದಿನ ವಿಷ್ಣು ಸಹಸ್ರನಾಮ ಪಠಿಸಿ. ನಿಮ್ಮ ಸುತ್ತ ಒಂದು ಗುಣಾತ್ಮಕ ಪ್ರಭಾವಳಿ ಏರ್ಪಡುತ್ತದೆ. ಇದು ನಿಮ್ಮನ್ನು ಆಪತ್ತುಗಳಿಂದ ರಕ್ಷಿಸುತ್ತದೆ.

ಕನ್ಯಾ ರಾಶಿ
ಇಷ್ಡುದಿನ ಭಾಗ್ಯಸ್ಥಾನದಲ್ಲಿ ಗುರು ಇದ್ದರೂ ವಕ್ರಿಯಾಗಿದ್ದುದರಿಂದ ಗುರುಬಲದ ಫಲ ನಿಷ್ಕಿçಯ ವಾಗಿತ್ತು. ಈ ವಾರದಲ್ಲಿ ಗುರು ವಕ್ರಗತಿ ಬಿಟ್ಟು ಸುಪಥದಲ್ಲಿ ಚಲಿಸುತ್ತಾನೆ. ಇದರ ಪುಣ್ಯಫಲಗಳು ನಿಮಗೆ ಅನುಭವಕ್ಕೆ ಬರುತ್ತದೆ. ಮಾನ ಸನ್ಮಾನ, ಗುರುಹಿರಿಯರ ಆಶೀರ್ವಾದ ವೃತ್ತಿಯಲ್ಲಿ ಬಡ್ತಿ ಅನಿರೀಕ್ಷಿತ ಧನಲಾಭ ಇವೆಲ್ಲವನ್ನು ಅನುಭವಿಸುತ್ತೀರಿ. ನಿಮಗೆ ಈಗ ದೈವಾನುಗ್ರಹ ಇದೆ. ಯಾವುದೇ ಯೋಜನೆಗಳಲ್ಲಿ ತೊಡಗಿಕೊಂಡರೂ ಜಯಶಾಲಿಯಾಗುತ್ತೀರಿ.

ತುಲಾ ರಾಶಿ
ಇನ್ನು ಕೆಲವೇ ದಿನಗಳಲ್ಲಿ ಮೂರು ಗ್ರಹಗಳ ಅನುಗ್ರಹ ಕ್ಕೆ ಪ್ರಾಪ್ತವಾಗುತ್ತೀರಿ. ಗುರು, ಶನಿ ಹಾಗೂ ಕೇತು. ಗುರು ಭಾಗ್ಯಸ್ಥಾನಕ್ಕೆ, ಶನಿ ಆರನೆಯ ಮನೆಗೆ ಹಾಗೂ ಕೇತು ಲಾಭ ಸ್ಥಾನಕ್ಕೆ ಪ್ರವೇಶವಾಗುತ್ತಾರೆ. ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ಯೋಗ. ನಿಮ್ಮ ಕಷ್ಡಗಳೆಲ್ಲ ಮುಗಿಯುತ್ತ ಬಂದಿದೆ. ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಶಾಂತಿ ಸಮಾಧಾನ ನೆಲೆಸುತ್ತದೆ. ಮನೆಯಲ್ಲಿ ಶುಭಕಾರ್ಯ ಮಾಡುವ ಯೋಗ ಇದೆ.

ವೃಶ್ಚಿಕ ರಾಶಿ
ಗುರುಬಲ ಇದ್ದರೂ ಸಾಕಷ್ಡು ಕಷ್ಟ ಪಟ್ಟಿದೀರ. ಈ ವಾರದಲ್ಲಿ ಗುರು ವಕ್ರಗತಿಯಿಂದ ಪಾರಾಗಿ ನೇರವಾಗಿ ಚಲಿಸುತ್ತಾನೆ. ಈಗ ನಿಮಗೆ ಏಳನೇ ಮನೆಯ ಗುರುವಿನ ಪ್ರಯೋಜನ ಫಲಗಳು ಅನುಭವಕ್ಕೆ ಬರುತ್ತದೆ. ಗುರು ಮತ್ತು ಕೇತುವಿನ ಬಲ ಇದೆ. ಗುರು ಒಳ್ಳೆಯ ಕೆಲಸಗಳನ್ನು ಮಾಡಿಸುತ್ತಾನೆ. ರಕ್ಷಣೆ ಕೊಡುತ್ತಾನೆ. ಜೀವನ ಸರಾಗ ಆಗುವಂತೆ ಮಾಡುತ್ತಾನೆ. ಕೇತು ಲಾಭಸ್ಥಾನದಲ್ಲಿ ಇದ್ದು ಧನಲಾಭ ಕೊಡುತ್ತಾನೆ.

ಧನಸ್ಸು ರಾಶಿ
ಎರಡನೇ ಮನೆಯಲ್ಲಿ ಸೂರ್ಯ ಬುಧ ಇದ್ದು ಹಣದ ಹರಿವನ್ನು ಉತ್ತಮ ಪಡಿಸುತ್ತಾರೆ. ಏಳನೇ ಮನೆಯಲ್ಲಿ ಕುಜ ಇರುವುದು ಸಂಗಾತಿಗೆ ಕೊಂಚ ಅಸೌಖ್ಯ ತೋರಿಸುತ್ತಿದೆ. ಮೂರನೇ ಮನೆಯಲ್ಲಿ ಶನಿ ಇದ್ದು ನಿಮ್ಮನ್ನು ಇನ್ನೂ ಬಲಪಡಿಸುತ್ತಾನೆ. ಶತ್ರುಗಳು ದೂರವಾಗುತ್ತಾರೆ. ಆರನೇ ಮನೆಯಲ್ಲಿ ಗುರು ಇರುವುದು ಆರೋಗ್ಯಕ್ಕೆ ಕೊಂಚ ಮಾರಕ. ಆರೋಗ್ಯದಲ್ಲಿ ಏರುಪೇರಾದರೆ ನಿರ್ಲಕ್ಷಿಸಬೇಡಿ. ಈಗ ಗುರುಬಲ ಇಲ್ಲ. ಮುಂದೆ ಗುರುಬಲ ಬಂದಾಗ ಸಮಸ್ಯೆಗಳು ಹಗುರವಾಗುತ್ತದೆ.

ಮಕರ ರಾಶಿ
ಈ ವಾರದಲ್ಲಿ ಗುರು ತನ್ನ ವಕ್ರಗತಿಯನ್ನು ಬಿಟ್ಟು ನೇರಮಾರ್ಗದಲ್ಲಿ ಚಲಿಸಲು ಪ್ರಾರಂಭಿಸುತ್ತಾನೆ. ಇದು ನಿಮಗೆ ಗುಣಾತ್ಮಕ ಫಲ ನೀಡುತ್ತದೆ. ಐದನೇ ಮನೆಯ ಗುರುಬಲದ ಸಂಪೂರ್ಣ ಶುಭಫಲವನ್ನು ಹೊಂದುತ್ತೀರಿ. ಹೊಸ ಕೆಲಸ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹಣದ ಹರಿವು ಉತ್ತಮವಾಗುತ್ತದೆ. ಒಳ್ಳೆಯ ಅವಕಾಶಗಳು ಸಿಗಲಿವೆ. ಪ್ರಗತಿ ಯಶಸ್ಸು ನಿಮ್ಮದಾಗಲಿದೆ.

ಕುಂಭ ರಾಶಿ
ಗ್ರಹಗಳು ಈಗ ನಿಮಗೆ ವ್ಯತಿರಿಕ್ತವಾಗಿ ಇದ್ದರೂ ಮುಂಬರುವ ದಿನಗಳು ನಿಮಗೆ ಶುಭಕರವಾಗಿದೆ ಹೀಗಾಗಿ ಯಾವುದೇ ರೀತಿಯ ಉದ್ವೇಗ ಬೇಡ.
ಏನಾದರೂ ನಿಮಗೆ ಇಷ್ಟವಾಗದ ಸಂಗತಿಗಳು ನಡೆದರೆ ಶೀಘ್ರ ಪ್ರತಿಕ್ರಿಯೆ ನೀಡಬೇಡಿ. ನಿಧಾನಿಸಿ. ನಿಮ್ಮ ಮಾತೇ ನಿಮಗೆ ಮುಳುವಾಗಬಹುದು. ಈಗ ಕೆಲವು ದಿನ ತಾಳ್ಮೆವಹಿಸಿ. ಮುಂದೆ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತದೆ.

ಮೀನ ರಾಶಿ
ಈಗ ನೀವು ಬಹಳಷ್ಡು ಅಗ್ನಿದಿವ್ಯಗಳನ್ನು ಎದುರಿಸಿದ್ದೀರಿ. ಬಹಳಷ್ಟು ನಷ್ಟಗಳೂ ಸಂಭವಿಸಿದೆ. ಎದೆಗುAದಬೇಡಿ. ಸಾಡೆಸಾತಿ ಶನಿ ಸಮಯದಲ್ಲಿ
ನಮ್ಮ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚುವಂತೆ ಅನುಭವವಾಗುತ್ತದೆ. ಪ್ರಾಮಾಣಿಕತೆ ಇರಲಿ ಹಾಗೂ ದೇವರಲ್ಲಿ ದೃಢ ನಂಬಿಕೆ ಇರಲಿ. ಎಲ್ಲವೂ ನಿಮಗೆ ಅನುಕೂಲವಾಗುವ ಕಾಲ ಬರುತ್ತದೆ. ಈಗ ಪರೀಕ್ಷೆ ಬರೆಯಿರಿ. ಫಲಿತಾಂಶ ಒಳ್ಳೆಯದೇ ಆಗಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular