ಮಾಗಡಿ. ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆ ಹೂ ತರಲು ಹೊರಟಿದ್ದ ಸುಪ್ರೀಯ ಗಾರ್ಮೆಟ್ಸ್ ಮಾಲೀಕ ರಸ್ತೆ ಅಪಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಪಟ್ಟಣದ ಜ್ಯೋತಿನಗರದ ನಿವಾಸಿ ಕುಮಾರು (42) ರಸ್ತೆ ಅಪಘಾತದಿಂದ ಮೃತಪಟ್ಟ ದುದೌರ್ವಿಯಾಗಿದ್ದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದದ ತಮ್ಮ ಪತ್ನಿಯ ಮನೆಯಲ್ಲಿ ಭಾನುವಾರವಾದ ಇಂದು ಸೀಮಂತ ಕಾರ್ಯಕ್ರಮ ಇದ್ದು ಕಾರ್ಯಕ್ರಮಕ್ಜೆ ಹೂ ತರಲು ವಿಜಯನಗರಕ್ಕೆ ತೆರಳಿ ಬೈಕ್ ನಲ್ಲಿ ಹೂ ತೆಗೆದುಕೊಂಡು ವಾಪಸ್ಸು ಬರುವ ವೇಳೆ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಶವವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಜೆ ಕೋಡೋಯ್ಯಲಾಗಿದೆ. ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ನಿ,,ಒರ್ಮಮಗಳು, ಸಹೋದರರನ್ನು ಅಗಲಿದ್ದಾರೆ.