ಮಾಗಡಿ : ಎರಡು ಬೈಕ್‍ಗಳಿಗೆ ಡಿಕ್ಕಿ ಹೊಡೆದ ಇನೋವಾ ಕಾರು ಇಬ್ಬರು ಬೈಕ್ ಸವಾರರು ಸಾವನಪ್ಪಿದ ಘಟನೆ ವರದಿಯಾಗಿದೆ.ತಾಲೂಕಿನ ಸಿಂಗ್ರಿಗೌಡನ ಪಾಳ್ಯದ ನಿವಾಸಿ ಗಂಗಾಧರಯ್ಯ [44], ಕುಣಿಗಲ್ ಪಟ್ಟಣದ ನಿವಾಸಿ ರಾಜೀಕ್ ಪಾಷ [42] ಮೃತಪಟ್ಟ ದುರ್ದೈವಿಗಳು . ಗಂಗಾಧರ್ ನಾರಸಂದ್ರ ಗ್ರಾಮಕ್ಕೆ ಬಂದು ಮಚ್ಚುಕುಡ್ಲು ತೊಡಿಸಿಕೊಂಡು ತೆರಳುತ್ತಿದ್ದು, ಮರೂರು ಹ್ಯಾಂಡ್‍ಪೋಸ್ಟ್‍ನ ಸುರುಚಿ ಹೋಟೆಲ್ ಪಕ್ಕದಲ್ಲಿ ರಾಜೀಕ್ ಪಾಷ ಪಂಚರ್ ಶಾಪ್ ಅಂಗಡಿ ಇಟ್ಟುಕೊಂಡಿದ್ದು, ಈ ಇಬ್ಬರು ತಮ್ಮ ಬೈಕ್‍ನಲ್ಲಿ ಮರೂರು ಹ್ಯಾಂಡ್ ಪೋಸ್ಟ್ ಕಡೆಗೆ ತೆರಳುವ ವೇಳೆ ಹಿಂಬದಿಯಿಂದ ಬಂದ ಇನೋವಾ ಕಾರು ಡಿಕ್ಕಿ ಹೊಡೆದ ಕೂಡಲೆ ಗಂಗಾಧರ್ ಸ್ಥಳದಲ್ಲೆ ಮೃತಪಟ್ಟರೆ ರಾಜೀಕ್ ಪಾಷ ಕುಣಿಗಲ್ಆ ಸ್ಪತ್ರೆಗೆ ಕೋಡೋಯ್ಯವ ವೇಳೆ ಮೃತಪಟ್ಟಿದ್ದಾರೆ.
ಗಂಗಾಧರಯ್ಯ ಮೃತದೇಹ ಮಾಗಡಿ ಸರ‍್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರೆ ರಾಜೀಕ್ ಪಾಷ ಶವ ಕುಣಿಗಲ್ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಗಂಗಾಧರಯ್ಯ ಅವರಿಗೆ ಪತ್ನಿ ಒಂದು ಗಂಡು,ಒಂದು ಹೆಣ್ಣು ಮಗು, ರಾಜೀಕ್ ಪಾಷ ಅವರಿಗೆ 2 ಗಂಡು ಒಂದು ಗಂಡು ಮಕ್ಕಳಿದ್ದಾರೆ. ಗಂಗಾಧರಯ್ಯ ಅವರ ಅಂತ್ಯಕ್ರಿಯೆ ಸಿಂಗ್ರಿಗೌಡಯ್ಯನ ಪಾಳ್ಯದ ತಮ್ಮ ಜಮೀನಿನಲ್ಲಿ ಗುರುವಾರ ನಡೆಯಲಿದೆ.
ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದ್ದು , ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


