ಮುಂಬೈ : ಮಹಾರಾಷ್ಟ್ರ ವಿಧಾನಸಭಾ ಚುನಾ ವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿರುವ ಮಹಾಯುತಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಸಸ್ಪೆನ್ಸ್ ಮುಂದುವರಿದಿದೆ. ಬಿಜೆಪಿಯು 131 ಸ್ಥಾನಗಳಲ್ಲಿ ಗೆದ್ದಿರುವುದರಿಂದ ದೇವೇಂದ್ರ ಫಡಣವೀಸ್ ಅವರ ಹೆಸರು ಮುಂಚೂಣಿಯಲ್ಲಿದೆ.
ಫಡಣವೀಸ್ ಅವರನ್ನು ಸಿಎಂ ಮಾಡುವು ದಕ್ಕೆ ತಮ್ಮದೇನೂ ಆಕ್ಷೇಪ ಇಲ್ಲ ಎಂದು ಎನ್‌ಸಿಪಿ ಸ್ಪಷ್ಟಪಡಿಸಿರುವುದಾಗಿ ಮೂಲಗಳು ಹೇಳಿವೆ. ಆದರೆ ಶಿವಸೇನಾ ಮಾತ್ರ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂದೆಯವರೇ ಮುAದುವರಿಯಬೇಕು ಎನ್ನುತ್ತಿದೆ. ಬಿಹಾರದಲ್ಲಿ ಬಿಜೆಪಿ ದೊಡ್ಡ ಪಕ್ಷವಾದರೂ, ಮುಖ್ಯಮಂತ್ರಿ ಸ್ಥಾನ ನಿತೀಶ್ ಕುಮಾರ್ ಅವರಿಗೆ ನೀಡಿರುವ ಸೂತ್ರವನ್ನೇ ಇಲ್ಲಿಯೂ ಅನುಸರಿಸಬೇಕು ಎಂದು ಶಿವಸೇನಾ ನಾಯಕರು ಆಗ್ರಹಿಸಿದ್ದಾರೆ.
ಹೀಗಾಗಿ ಸಿಎಂ ಯಾರು ಎನ್ನುವ ಪ್ರಶ್ನೆಗೆ ದೆಹಲಿಯಿಂದಲೇ ಉತ್ತರ ದೊರೆಯಬೇಕಿದೆ. ಮಂಗಳವಾರವೇ ಬಿಜೆಪಿ ಶಾಸಕಾಂಗ ಗುAಪಿನ ನಾಯಕರ ಆಯ್ಕೆಯಾಗಲಿದೆ. ಇದಕ್ಕಾಗಿ ಖುದ್ದಾಗಿ ಅಮಿತ್ ಶಾ ವೀಕ್ಷಕರಾಗಿ ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ಶಿಂದೆಯ ವರೊAದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಹೆಸರನ್ನೂ ಅಮಿತ್ ಶಾ ಅವರೇ ಘೋಷಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ. ಒಟ್ಟಾರೆ ಮಹಾ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರಿಂದ ಪ್ರಬಲ ಪೈಪೋಟಿ ಏರ್ಪಟ್ಟಿದ್ದು,ಕುತೂಹಲ ಮುಂದುವರಿದಿದೆ. ಬಿಜೆಪಿ 131 ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನಾ ಮತ್ತು ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳಲ್ಲಿ ವಿಜಯ ಸಾಧಿಸಿವೆ


