ಮಸ್ಕಿ: ಮಳೆಯಿಲ್ಲದೆ ತೊಗರಿ ಬೆಳೆ ನಾಶಗೊಂಡ ಹಿನ್ನೆಲೆ ತನ್ನ ಹೊಲದಲ್ಲೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾರಲದಿನ್ನಿ ತಾಂಡಾ ಗ್ರಾಮದಲ್ಲಿ ಬುಧುವಾರ ರಾತ್ರಿ ನಡೆದಿದೆ.
ಚೆಂದಪ್ಪ (60) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ 3 ಎಕರೆ ಭೂಮಿ ಇದ್ದು, ಮಸ್ಕಿ ಎಸ್ ಬಿ ಐ ಬ್ಯಾಂಕಿನಲ್ಲಿ 2.40 ಲಕ್ಷ, ಹಾಗೂ ಅಲ್ಲಲ್ಲಿ 4 ಲಕ್ಷ ಸಾಲ ಪಡೆದುಕೊಂಡು ಕೃಷಿ ಚಟುವಟಿಕೆ ನಡೆಸಿದ್ದರು . ಮಳೆ ನಿರೀಕ್ಷೆಯಲ್ಲಿದ್ದ ರೈತ ಚಂದಪ್ಪ ಸಾಲ ಮಾಡಿ ತನ್ನ ಮೂರು ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಬಾರದ ಹಿನ್ನೆಲೆ ಉಂಟಾದ ಬರಕ್ಕೆ ತೊಗರಿ ಬೆಳೆ ಒಣಗಿ ಹೋಗಿವೆ. ಇದರಿಂದ ಮನನೊಂದು ತನ್ನ ಜಮೀನಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿನೀಡಿದರು.
.


