ಮಡಿಕೇರಿ; ; ಮದೆನಾಡು ವ್ಯಾಪ್ತಿಯ ಬೆಟ್ಟತ್ತುರು ಗ್ರಾಮದ ಗಿರೀಶ್ ಎಂಬುವವರ ಪುತ್ರಿ ಪೂಜಾ ಎಂಬ ಬಾಲಕಿ ಮಡಿಕೇರಿಯ ಸಂತ ಮೈಕಲರ ಶಾಲೆಯ ಪ್ರಥಮ PUC ಯಲ್ಲಿ ವ್ಯಾಸಂಗ ಮಾಡುತಿದ್ದು ಸಂಜೆ 5:30 ಕ್ಕೆ ಬೆಟ್ಟತ್ತೂರಿನ ತನ್ನ ಮನೆಗೆ ಬಸ್ಸಿನಲ್ಲಿ ಬಂದು ಇಳಿದು ಸ್ವಲ್ಪ ದೂರ ನಡೆಯುವಾಗ ಏಕಏಕಿ ಆನೆಯೊಂದು ದಾಳಿ ನಡೆಸಿದ್ದು ಬಾಲಕಿ ಸ್ಥಳದಲ್ಲಿ ಮೃತಾಪಟ್ಟಿದ್ದಾಳೆ.
ಬಾಲಕಿಯ ಶವವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ಹೋರಹಾಕಿದ್ದಾರೆ. ಇತ್ತಿಚ್ಚಿನ ದಿನಗಳಲ್ಲಿ ಚಿರತೆ,ಕಾಡಾನೆ ಹಾಗೂ ಇನ್ನಿತರ ಕಾಡು ಪ್ರಾಣಿಗಳ ದಾಳಿಯಿಂದಾಗಿ ಬಡಜನರ ಪ್ರಾಣ ಹಾನಿಯಾಗುತ್ತಿದ್ದು ಸಂಬಂಧಪಟ್ಡ ಇಲಾಖೆ ಮೌನ ಮುರಿದಿದ್ದ ಬಗ್ಗೆ ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ.


