ಮಡಿಕೇರಿ : ಜನವರಿ ಒಂದರಂದು ಮಡಿಕೇರಿಯ ಕೆದಕಲ್ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಮಹೇಂದ್ರ ಬೊಲೆರೋ ನಿಯೋ ಕಾರುಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಪಡಿಸಿದ ಹಿನ್ನಲೆ ಪಾದಚಾರಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮೂಲತ ಚೆಟ್ಟಳ್ಳಿ ಗ್ರಾಮದ ಬಲ್ಲಾರಂಡ ಹರೀಶ್ ತಮ್ಮಯ್ಯ ( 55) ಎಂದು ತಿಳಿದುಬಂದಿದೆ. ಕೆದಕಲ್ ನ ತೋಟದಲ್ಲಿ ಸಿಬ್ಬಂಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚೆಟ್ಟಳ್ಳಿ ಈರಳೆ ವಳಮುಡಿ ಗ್ರಾಮದ ಬಲ್ಲಾರಂಡ ಹರೀಶ್ ತಮ್ಮಯ್ಯ 1 ರಂದು ಸಂಜೆ ಅಂಗಡಿ ಮಾಲಿಕನಿಗೆ ಹೊಸ ವರ್ಷದ ಶುಭಾಶಯ ಹೇಳಲು ರಸ್ತೆ ದಾಟುತ್ತಿದ್ದಾಗ ಮಡಿಕೇರಿಯತ್ತ ಸಾಗುತ್ತಿದ್ದ ನೂತನ ಬೊಲೆರೋ ನಿಯೋ ಕಾರುಗಳನ್ನು ಸಾಗಿಸುತ್ತಿದ್ದ ಲಾರಿ ಹರೀಶ್ ಗೆ ಡಿಕ್ಕಿ ಹೊಡೆದಿದೆ ಇದರಿಂದ ಹರೀಶ್ ತಮ್ಮಯ್ಯ ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ತುರ್ತು ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪರಿಣಾಮಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ದೊರೆತಿದೆ.