ಮಡಿಕೇರಿ : ಉದ್ಯಮದಲ್ಲಿ ನಷ್ಟ ಮತ್ತು ಸಾಲಗಾರರ ಕಿರುಕುಳ ಯಿಂದ ಬೇಸತ್ತು ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಕುಶಾಲನಗರ ಸಮೀಪದ ಕೊಪ್ಪದಲ್ಲಿ ನಡೆದಿದೆ.
ಮೃತರನ್ನು ಕೊಪ್ಪ ನಿವಾಸಿ ಸುರೇಶ್( 39) ಮತ್ತು ಪತ್ನಿ ಪಲ್ಲವಿ (28) ಎಂದು ತಿಳಿದುಬಂದಿದೆ. ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದ ಸುರೇಶ್ ದಂಪತಿಗಳು ದೇವಸ್ಥಾನಕ್ಕೆ ಎಂದು ಮನೆಯಿಂದ ತೆರಳಿ ತಮ್ಮ ದೊಡ್ಡ ಹೊನ್ನೂರು ಕಾವಲ್ ಜಮೀನು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಮೃತದೇಹಗಳನ್ನು ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ. ಮೃತರು ಇಬ್ಬರು ಪುಟ್ಟ ಕಂದಮ್ಮಗಳನ್ನು ಅಗಲಿದ್ದಾರೆ.ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.