Saturday, March 14, 2026
Flats for sale
Homeರಾಜ್ಯಮಡಿಕೇರಿ ; ಸಂಕಷ್ಟಕ್ಕೆ ಸಿಲುಕಿದ ಅಯ್ಯಪ್ಪ ಭಕ್ತರಿಗೆ ಆಶ್ರಯ ನೀಡಿದ ತಿತಿಮತಿಯ ಜುಮಾ ಮಸೀದಿ ಆಡಳಿತ...

ಮಡಿಕೇರಿ ; ಸಂಕಷ್ಟಕ್ಕೆ ಸಿಲುಕಿದ ಅಯ್ಯಪ್ಪ ಭಕ್ತರಿಗೆ ಆಶ್ರಯ ನೀಡಿದ ತಿತಿಮತಿಯ ಜುಮಾ ಮಸೀದಿ ಆಡಳಿತ ಮಂಡಳಿ.

ಮಡಿಕೇರಿ ; ಪ್ರಸ್ತುತ ರಾಜಕೀಯ ಮತ್ತು ಕೋಮು ಸಂಘರ್ಷದ ವ್ಯವಸ್ಥೆಯಲ್ಲಿ ಕೊಡಗಿನ ಮಸೀದಿಯೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ತಿತಿಮತಿಯಲ್ಲಿರುವ ಜುಮಾ ಮಸೀದಿಯು ಸಂಕಷ್ಟಕ್ಕೆ ಸಿಲುಕಿದ ಶಬರಿ ಮಲೆಯ ಭಕ್ತರಿಗೆ ಆಶ್ರಯ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ಸಾರಿದ್ದಾರೆ.

ಬೆಳಗಾವಿಯಿಂದ ಕೊಡಗು ಜಿಲ್ಲೆಯ ಮಾರ್ಗವಾಗಿ ಬೈಕ್ ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರು ಭಕ್ತರು ಗುರುವಾರ ರಾತ್ರಿ ಹವಾಮಾನ ವೈಪರಿತ್ಯ ಹಾಗೂ ಬೆಳಕು ಕಡಿಮೆಯಾದ ಕಾರಣ ಪ್ರಯಾಣ ಮುಂದುವರಿಸಲು ಸಾಧ್ಯವಾಗದೇ ತಿತಿಮತಿಯಲ್ಲಿ ಸ್ಥಗಿತಗೊಳಿಸಿದ್ದಾರೆ. ಕಮಲೇಶ್ ಗೌರಿ, ಭೀಮಪ್ಪ ಸನದಿ, ಶಿವಾನಂದ್ ಎನ್, ಗಂಗಾಧರ್ ಪಿ ಮತ್ತು ಎಸ್ ಸಿದ್ಧಾರೂಡ್ ಅವರು ಜುಮ್ಮಾ ಮುಸೀದಿ ಬಳಿ ಹೋಗಿ ನೆರವು ಕೇಳಿದರು ಮುಂದೆ ಹೇಗೆ ಹೋಗಬೇಕು ಎಂಬುದು ಗೊತ್ತಾಗಲಿಲ್ಲ ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆಯ ಭಕ್ತರ ನೆರಳಿಗೆ ಬಂದಿತ್ತು ರಾತ್ರಿ ಮುಸೀದಿಯಲ್ಲಿ ತಂಗಲು ಅನುಮತಿ ನೀಡಿದ್ದಾರೆ ಅಲ್ಲದೆ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ ಹಾಗೂ ಕತೀಬ್ ಒದಗಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಆರು ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ ಶಬರಿಮಲೆಗೆ ತೆರಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular