ಮಡಿಕೇರಿ : ಕೊಡಗು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿಬಿ ಕುಪ್ಪೆ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ಆನೆಯೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಘಟನೆ ಬಗ್ಗೆ ವನ್ಯಜೀವಿ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದರು. ರೈತರು ಹಾಕಿರುವ ವಿದ್ಯುತ್ ಬೇಲಿಯಿಂದ ಆನೆಗಳು ವಿದ್ಯುತ್ ತಗುಲಿ ಸಾಯದಂತೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬೇಲಿಗಾಗಿ ರೈತರು ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ವನ್ಯಜೀವಿ ಕಾರ್ಯಕರ್ತ ಜೋಸೆಫ್ ಹೂವರ್ ಮಾತನಾಡಿ, "ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದಿಂದಾಗಿ ನಾವು ಆಗಾಗ್ಗೆ ವಿದ್ಯುತ್ ಆಘಾತದಿಂದ ಆನೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ರೈತರು ತಮ್ಮ ಬೆಳೆ ಮತ್ತು ತೋಟವನ್ನು ರಕ್ಷಿಸಲು ಅಕ್ರಮವಾಗಿ ಓವರ್‌ಹೆಡ್ ಲೈನ್‌ಗಳಿಂದ ವಿದ್ಯುತ್ ಎಳೆದು ಅದನ್ನು ಬೇಲಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಆನೆ, ಹುಲಿ, ಚಿರತೆ, ಕರಡಿ ಇವುಗಳಿಗೆ ವಿದ್ಯುತ್ ಸ್ಪರ್ಶ ನೀಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದೆ. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ