ಮಡಿಕೇರಿ : ಮಡಿಕೇರಿ ಕಾರು, ಜೀಪ್, ಜೆಸಿಬಿ, ಇಟಾಚಿ ಸೇರಿದಂತೆ ವಿವಿಧ ವಾಹನಗಳನ್ನು ಲೀಲಾಜಾಲವಾಗಿ ಚಲಾಯಿಸುವ 11 ವರ್ಷದ ಕಾವೇರಿಮನೆ ಚಂದನ್ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದಿದ್ದಾನೆ.
ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಚಂದನ್ ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮದ ಕಾವೇರಿಮನೆ ಭರತ್ ಹಾಗೂ ಯೋಗಿತಾ ದಂಪತಿಯ ಪುತ್ರ. ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಇದೇ ಅ.12 ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.
ವಾಹನ ಚಾಲನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಚಂದನ್ ಎಲ್ಲಾ ರೀತಿಯ ವಾಹನಗಳನ್ನು ಚಲಾಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಕಾವೇರಿಮನೆ ಭರತ್ ಹರ್ಷ ವ್ಯಕ್ತಪಡಿಸಿದ್ದಾರೆ. ಚಂದನ್ ವಾನಹ ಚಾಲನಾ ಕೌಶಲ್ಯವನ್ನು ಕಂಡು ಸಂತಸಗೊಂಡಿರುವ ಹಲವಾರು ಅಭಿಮಾನಿಗಳು ಚಂಚನ್‌ನು, ಅಭಿನಂದಿಸಿದ್ದಾರೆ.