ಮಡಿಕೇರಿ : ಮಡಿಕೇರಿಯ ಸ್ಪೈಸಸ್ ಅಂಗಡಿಯಲ್ಲಿ ಮೂವರು ದೇಶದ ಪ್ರಧಾನಿಗಳಾದ ಮೋದಿ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇವರ ವಿರುದ್ಧ ಸುಮೊಟೋ ಕೇಶ್ ದಾಖಲಿಸಿ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.
ಮಡಿಕೇರಿಯ ರಾಣಿ ಪೇಟೆಯ ನಿವಾಸಿ ಇಬ್ರಾಹಿಂ ಎಂಬುವರ ಪುತ್ರ ಫಹಾದ್ ಎಮ್ಮ. ಇ, (31) ತ್ಯಾಗರಾಜ ಕಾಲನಿಯ ನಿವಾಸಿ ಹುಸಿನ್ ಎಂಬುವರ ಪುತ್ರ ಬಾಸಿಲ್ ಎಂ ಎಚ್ (29) ಹಾಗೂ ತ್ಯಾಗರಾಜ ಕಾಲೋನಿಯ ನಿವಾಸಿಯಾದ ಮಜಿದ್ ಎಂಬ ಅವರ ಪುತ್ರ ಸಮೀರ್ ಎಂ.ಎಂ (31) ಬಂಧಿತ ಆರೋಪಿಗಳಾಗಿದ್ದಾರ.
ಇವರಲ್ಲಿ ಫಹಾದ್ ಎಮ್.ಇ. ಎಂಬುವನು ಸೊಂಟದ ಕೆಳಗಿನ ಭಾಷೆಯನ್ನು ಬಳಸಿ ಯಾವುದೇ ಅಂಜಿಕೆ ಇಲ್ಲದೆ ಈ ದೇಶದ ಪ್ರಧಾನಿಯನ್ನು ನಿಂದಿಸಿ ಹುಚ್ಚಾಟ ಮೆರೆದಿರುವುದನ್ನು ವೀಡಿಯೋದಲ್ಲಿ ನೋಡಿದಾಗ ಅಂಜಿಕೆಯಾಗುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಥವರನ್ನು ಕೂಡಲೇ ಮಟ್ಟ ಹಾಕದಿದ್ದರೆ ಮುಂದೆ ಸಮಾಜಕ್ಕೆ ದೊಡ್ಡ ಗಂಡಾಂತರವನ್ನು ಇವರು ತಂದುಡ್ಡುವ ಸಾಧ್ಯತೆಯಿದ್ದು, ಯಾವುದೇ ರಾಜಕೀಯವನ್ನು ಬೆರೆಸದೆ, ತಕ್ಕ ಶಿಕ್ಷೆ ಆಗಬೇಕೆಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ವಿಕೃತ ಹುಡುಗರ ಅವಹೇಳನ ವಿಡಿಯೋ ನೋಡಿದ ನೆಟ್ಟಿಗರು ಕೂಡಲೇ ಮಟ್ಟ ಹಾಕಲು ಒತ್ತಾಯಿಸಿದ್ದಾರೆ.


