Saturday, December 14, 2024
Flats for sale
Homeಜಿಲ್ಲೆಮಂಡ್ಯ ; ಕಬಡ್ಡಿ ಆಟವಾಡುತ್ತಿರುವಾಗಲೇ ಏಕಾಏಕಿ ಕುಸಿದು ಉಡುಪಿ ಮೂಲದ ಯುವ ಆಟಗಾರ ಸಾವು…!

ಮಂಡ್ಯ ; ಕಬಡ್ಡಿ ಆಟವಾಡುತ್ತಿರುವಾಗಲೇ ಏಕಾಏಕಿ ಕುಸಿದು ಉಡುಪಿ ಮೂಲದ ಯುವ ಆಟಗಾರ ಸಾವು…!

ಮಂಡ್ಯ : ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಘಾತದಿಂದ ಸಾವನಪ್ಪುವ ಘಟನೆ ಹೆಚ್ಚುತ್ತಲೆ ಇದೆ. ಕಬಡ್ಡಿ ಆಟವಾಡುತ್ತಿದ್ದಗಲೇ ಏಕಾಏಕಿ ಕುಸಿದು ಬಿದ್ದು ಹೃದಯಾಘಾತದಿಂದ ಯುವ ಕಬಡ್ಡಿ ಆಟಗಾರ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ನಡೆದಿದೆ.

ಪ್ರೀತಂ ಶೆಟ್ಟಿ(26) ಮೃತರು. ಉಡುಪಿ ಜಿಲ್ಲೆಯ ಹೇಬ್ರಿ ಮೂಲದ ಪ್ರೀತಂ ಶೆಟ್ಟಿ ಹನುಮ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕಬ್ಬಡಿ ಆಡಿದ ನಂತರ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸ ಪಡೆದ ಬಳಿಕ ಮತ್ತೊಮ್ಮೆ ಏನೂ ಆರೋಗ್ಯ ಸಮಸ್ಯೆ ಇಲ್ಲವೆಂದು ತಿಳಿದ ನಂತರ ಆಟ ಆಡುವಂತಹ ಸಂಧರ್ಭದಲ್ಲಿ ಏಕಾಏಕಿ ತೀವ್ರ ಎದೆನೋವು ಕಣಿಸಿಕೊಂಡು ಕುಸಿದು ಬಿದ್ದು ಮೃತ ಪಟ್ಟಿದ್ದಾರೆಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular